ಮಂಗಳೂರು: ಭಗತ್ ಸಿಂಗ್ ಹುತಾತ್ಮ ಜ್ಯೋತಿ ಮೆರವಣಿಗೆ

Update: 2023-03-23 15:30 GMT

ಮಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್ ಮತ್ತವರ ಸಂಗಾತಿ ರಾಜ್‌ಗುರು, ಸುಖದೇವರಂತಹ ಕ್ರಾಂತಿಕಾರಿಗಳ ಆಶಯ ಇವತ್ತಿಗೂ ಈಡೇರಲಿಲ್ಲ. ಸ್ವಾತಂತ್ರ್ಯ ಅಂದರೆ ಕೇವಲ ಯಜಮಾನರ ಬದಲಾವಣೆ ಯಲ್ಲ. ಬದಲಾಗಿ ಶೋಷಣೆರಹಿತ ಸಮಾಜ ಕಟ್ಟುವುದಾಗಿದೆ. ಅದು ಭಗತ್ ಸಿಂಗ್‌ರ ಕನಸೂ ಆಗಿತ್ತು ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಮುಖಂಡ ಶ್ರೀನಾಥ್ ಕುಲಾಲ್ ಹೇಳಿದರು.

ಡಿವೈಎಫ್‌ಐ ಮಂಗಳೂರು ನಗರ ಸಮಿತಿಯ ವತಿಯಿಂದ ಭಗತ್ ಸಿಂಗರ ಹುತಾತ್ಮ ದಿನದ ಅಂಗವಾಗಿ ‘ನಿರುದ್ಯೋಗದ ವಿರುದ್ಧ- ಸೌಹಾರ್ದ ಭಾರತಕ್ಕಾಗಿ’ ಎಂಬ ಘೋಷಣೆಯಡಿ ನಗರದ ಹ್ಯಾಮಿಲ್ಟನ್ ವೃತ್ತದ ಬಳಿಯಿಂದ ಕ್ಲಾಕ್‌ ಟವರ್‌ವರೆಗೆ ಗುರುವಾರ ನಡೆದ ಭಗತ್ ಸಿಂಗ್ ಹುತಾತ್ಮ ಜ್ಯೋತಿ ಮೆರವಣೆಗೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಡಿವೈಎಫ್‌ಐ ನಗರ ಕೋಶಾಧಿಕಾರಿ ತಯ್ಯೂಬ್ ಬೆಂಗರೆ, ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಮುಖಂಡ ಸುನೀಲ್ ತೇವುಲ, ನಗರ ಕಾರ್ಯದರ್ಶಿ ನವೀನ್ ಕೊಂಚಾಡಿ, ಅಧ್ಯಕ್ಷ ಜಗದೀಶ್ ಬಜಾಲ್, ಕಾರ್ಮಿಕ ಮುಖಂಡರಾದ ವಿಲ್ಲಿ ವಿಲ್ಸನ್, ಪ್ರಮೀಳಾ ದೇವಾಡಿಗ, ಪ್ರಮೀಳಾ ಶಕ್ತಿನಗರ, ಆಶಾ ಬೋಳೂರು, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ಅಧ್ಯಕ್ಷ ವಿನೀತ್ ದೇವಾಡಿಗ, ಹನೀಫ್ ಬೆಂಗರೆ, ರಾಜೇಶ್ ಉರ್ವಸ್ಟೋರ್, ಪುನೀತ್ ಉರ್ವಸ್ಟೋರ್ ಉಪಸ್ಥಿತರಿದ್ದರು.

Similar News