ನೋಂದಾಯಿತ ಸರಕು ಸಾಗಣೆ ವಾಹನಗಳ ಬಾಡಿಗೆ ದರ ಪರಿಷ್ಕರಿಸಿ ಸರಕಾರ ಆದೇಶ

Update: 2023-03-23 16:12 GMT

ಬೆಂಗಳೂರು, ಮಾ.23: ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಸರಕು ಸಾಗಣೆ ವಾಹನಗಳಿಗೆ ಬಾಡಿಗೆ ದರವನ್ನು ಪರಿಷ್ಕರಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

ಗೂಡ್ಸ್ ವಾಹನಗಳ ಬಾಡಿಗೆ ದರ ಏರಿಕೆಯಾಗಿದ್ದು ಏಷ್ಟು?: 6 ಚಕ್ರಗಳ ಲಾರಿಗೆ 8 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 37 ರೂ.ಗೆ ಬಾಡಿಗೆ ದರ ಏರಿಕೆ ಮಾಡಲಾಗಿದೆ. 6 ಚಕ್ರಗಳ ಲಾರಿಗೆ 12 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 50 ರೂ.ಗೆ ಹೆಚ್ಚಳ ಮಾಡಲಾಗಿದೆ. 10 ಚಕ್ರಗಳ ಲಾರಿಗೆ 19 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 60 ರೂ.ಗೆ ಬಾಡಿಗೆ ದರ ಏರಿಸಲಾಗಿದೆ.

12 ಚಕ್ರಗಳ ಲಾರಿಗೆ 25 ಮೆಟ್ರಿಕ್ ಟನ್ ಪತಿ ಕಿ.ಮೀ.ಗೆ 67 ರೂ.ಗೆ ಏರಿಕೆ ಮಾಡಲಾಗಿದೆ. 14 ಚಕ್ರಗಳ ಲಾರಿಗೆ 30 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 76 ರೂ.ಗೆ ಹೆಚ್ಚಿಸಲಾಗಿದೆ. 16 ಚಕ್ರಗಳ ಲಾರಿಗೆ 35 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 89 ರೂ.ಗೆ ಬಾಡಿಗೆ ದರ ಏರಿಕೆ ಮಾಡಿ ಪರಿಷ್ಕರಣೆ ಮಾಡಲಾಗಿದೆ.

ವಾಹನ ವೆಚ್ಚ, ನೋಂದಣಿ ವೆಚ್ಚ, ವಾಹನದ ತೆರಿಗೆ, ಬಿಡಿಭಾಗಗಳು, ವಿಮಾ ಪಾಲಿಸಿ ಹಾಗೂ ಇಂಧನ ದರಗಳು ಗಣನೀಯವಾಗಿ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ಸರಕು ಸಾಗಣೆ ವಾಹನಗಳಿಗೆ ಬಾಡಿಗೆ ದರಗಳ ಪರಿಷ್ಕರಣೆ ಅಗತ್ಯವೆಂದು ಸರಕಾರ ಪರಿಗಣಿಸಿದೆ. 

ಸಾಗಾಟ ಸರಕು ವಾಹನಗಳ ಬಾಡಿಗೆ ದರ ಹೆಚ್ಚುವುದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬೆಲೆ ಏರಿಕೆಗಳಿಂದ ಕಂಗೆಟ್ಟಿರುವ ಗ್ರಾಹಕರು ಇದೀಗ ಮತ್ತೊಂದು ಹೊರೆ ಬೀಳಲಿದೆ.

Similar News