ಹಿಂಡೆನ್‌ಬರ್ಗ್‌ ನೂತನ ವರದಿ ಬಳಿಕ ಜಾಕ್‌ ಡೋರ್ಸಿ ಸಂಪತ್ತಿನ ಮೌಲ್ಯ ಭಾರೀ ಕುಸಿತ

Update: 2023-03-24 08:19 GMT

ವಾಷಿಂಗ್ಟನ್: ಜಾಕ್‌ ಡೋರ್ಸಿ (Jack Dorsey) ಅವರ ಬ್ಲಾಕ್‌ ಇಂಕ್.‌ (Block Inc.) ಪಾವತಿ ಸಂಸ್ಥೆಯು ವ್ಯಾಪಕ ಅವ್ಯವಹಾರಗಳನ್ನು ಅವಗಣಿಸಿದೆ ಎಂದು ಹಿಂಡೆನ್‌ಬರ್ಗ್‌ ಸಂಸ್ಥೆ (Hindenburg Research) ತನ್ನ ನೂತನ ವರದಿಯಲ್ಲಿ  ಹೇಳಿದ ಬೆನ್ನಲ್ಲೇ ಡೋರ್ಸಿ ಅವರ ಒಟ್ಟು ಸಂಪತ್ತಿನ ಮೌಲ್ಯ ಗುರುವಾರ 526 ಮಿಲಿಯನ್‌ ಡಾಲರ್‌ ಕುಸಿತ ಕಂಡಿದೆ. ಈ ಶೇ. 11 ರಷ್ಟು ಕುಸಿತದಿಂದ ಡೋರ್ಸಿ ಅವರ ಸಂಪತ್ತು ಈಗ 4.4 ಬಿಲಿಯನ್‌ ಡಾಲರಿಗೆ ಇಳಿಕೆಯಾಗಿದೆ ಎಂದು ಬ್ಲೂಂಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌  ಹೇಳಿದೆ.

ಬ್ಲಾಕ್‌ ಸಂಸ್ಥೆಯು ಬಳಕೆದಾರ ಮೆಟ್ರಿಕ್ಸ್‌ ಅನ್ನು ಕೃತಕವಾಗಿ ಏರಿಕೆ ಮಾಡಿದೆ  ಎಂದು ಆರೋಪಿಸಿದೆ. ಆದರೆ ಈ ಆರೋಪಗಳನ್ನು ಬ್ಲಾಕ್‌ ನಿರಾಕರಿಸಿದೆಯಲ್ಲದೆ ಹಿಂಡೆನ್‌ಬರ್ಗ್‌ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಸಾಮಾಜಿಕ ಜಾಲತಾಣ ಟ್ವಿಟರ್‌ ಸಹಸ್ಥಾಪಕರಾಗಿರುವ ಜಾಕ್‌ ಡೋರ್ಸಿ ಅವರ ಹೆಚ್ಚಿನ ಸಂಪತ್ತು ಬ್ಲಾಕ್‌ ಸಂಸ್ಥೆಯೊಂದಿಗೆ ಜೋಡಿಕೆಯಾಗಿದೆ. ಅವರು ಈ ಸಂಸ್ಥೆಯಲ್ಲಿ 3 ಬಿಲಿಯನ್‌ ಡಾಲರ್‌ ಪಾಲುದಾರಿಕೆ ಹೊಂದಿದ್ದರೆ ಈದೀಗ ಎಲಾನ್‌ ಮಸ್ಕ್‌ ಮುಖ್ಯಸ್ಥರಾಗಿರುವ  ಟ್ವಿಟರ್‌ನಲ್ಲಿ ಅವರ ಪಾಲುದಾರಿಕೆ ಮೊತ್ತ 388 ಮಿಲಿಯನ್‌ ಡಾಲರ್‌ ಆಗಿದೆ.

ಇದನ್ನೂ ಓದಿ: ಹದಿಹರೆಯದವರು ಪ್ರೇಮ ವೈಫಲ್ಯದಿಂದ ಚೇತರಿಸಿಕೊಳ್ಳಲು 40 ಲಕ್ಷ ಡಾಲರ್ ವೆಚ್ಚ ಮಾಡಲಿರುವ ನ್ಯೂಝಿಲ್ಯಾಂಡ್

Similar News