ಮಂಗಳೂರು: ರಾಹುಲ್ ಗಾಂಧಿಯ ಲೋಕಸಭಾ ಸದಸ್ಯತ್ವ ಅನರ್ಹ ಖಂಡಿಸಿ ಪ್ರತಿಭಟನೆ

Update: 2023-03-24 15:06 GMT

ಮಂಗಳೂರು: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹ ಗೊಳಿಸಿದ ಕ್ರಮವನ್ನು ಖಂಡಿಸಿ ಹಾಗೂ ಸರಕಾರಿ ಯಂತ್ರವನ್ನು ದುರುಪಯೋಗಪಡಿಸುತ್ತಿರುವ ಬಿಜೆಪಿಯ ವಿರುದ್ಧ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ನಗರದ ಲಾಲ್‌ಭಾಗ್‌ನ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಯಿತು.

ಬಿಜೆಪಿಗೆ ಧಿಕ್ಕಾರ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಪ್ರಜಾಪ್ರಭುತ್ವ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಧರಣಿ ಕುಳಿತರು.

ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತು ವಿಧಾನಸಭೆಯ ವಿಪಕ್ಷ ಉಪನಾಯಕ ಯು ಟಿ ಖಾದರ್ ಮಾತನಾಡಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಮಾಜಿ ಶಾಸಕರಾದ ಐವನ್ ಡಿಸೋಜ, ಜೆಆರ್ ಲೋಬೊ, ಶಕುಂತಳಾ ಶೆಟ್ಟಿ, ಮೊಯ್ದಿನ್ ಬಾವ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್  ಪಿಂಟೋ, ವಿಶ್ವಾಸ್‌ದಾಸ್, ಮನಪಾ ವಿಪಕ್ಷ ನಾಯಕ ನವೀನ್ ಡಿಸೋಜ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಉಪಮೇಯರ್ ಪುರೊಸೋತ್ತಮ ಚಿತ್ರಪುರ, ಎನ್‌ಎಸ್‌ಯುಐ ದ.ಕ.ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಜೋಕಿಮ್ ಡಿ ಸೋಜ, ಉಮೇಶ್ ದಂಡಿಕೇರಿ, ಲಾರೆನ್ಸ್ ಡಿಸೋಜ, ಸಂತೋಷ್ ಶೆಟ್ಟಿ, ಅಬ್ದುರ‌್ರವೂಫ್, ಲಾನ್ಸಿಲಾಟ್ ಪಿಂಟೋ, ಅಪ್ಪಿ, ರಮಾನಂದ ಪೂಜಾರಿ, ಎಸಿ ವಿನಯರಾಜ್, ಪ್ರತಿಭಾ ಕುಳಾಯಿ, ಮುಹಮ್ಮದ್ ಬಡಗನ್ನೂರ್, ಡಾ. ರಾಜರಾಮ್, ಪ್ರವೀಣ್‌ಚಂದ್ರ ಆಳ್ವ,  ಸದಾಶಿವ ಶೆಟ್ಟಿ, ಆಶಿತ್ ಪಿರೇರ, ರಹ್ಮಾನ್ ಕುಂಜತ್ತಬೈಲ್, ಆಲ್ವಿನ್ ಪ್ರಕಾಶ್, ಮಂಜುಳಾ ನಾಯಕ್, ಶಾಂತಲಾ ಗಟ್ಟಿ, ಟಿ. ಹೊನ್ನಯ್ಯ, ದೀಪಕ್ ಪೂಜಾರಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಾಕೇಶ್ ದೇವಾಡಿಗ, ಸ್ಟಾನಿ ಆಲ್ವೇರೀಶ್ ಮತ್ತಿತರರು ಉಪಸ್ಥಿತರಿದ್ದರು.

Similar News