​ಯುವಕ ನಾಪತ್ತೆ

Update: 2023-03-25 13:56 GMT

ಮಂಗಳೂರು, ಮಾ.25: ನಗರದ ಕೋಡಿಕಲ್ ಸಮೀಪದ ಡೊಮಿನಿಕ್ ಚರ್ಚ್ ನಿವಾಸಿ ರೋಹನ್ ತೇಜ್‌ಪಾಲ್ ಸಾಲಿನ್ಸ್ (32) ನಾಪತ್ತೆಯಾಗಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾ.22ರಂದು ಸಂಜೆ 4ಕ್ಕೆ ರೋಹನ್ ತೇಜ್‌ಪಾಲ್ ಸಾಲಿನ್ಸ್ ತನ್ನ ಲಗೇಜ್ ಸಮೇತ ಮನೆ ಬಿಟ್ಟು ಹೋಗಿದ್ದಾರೆ. ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದ್ದು, ಎಲ್ಲಿ ಹುಡುಕಾಡಿದರೂ ಪ್ರಯೋಜನವಾಗಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿವೆ.

Similar News