×
Ad

ಮಂಗಳೂರು: ವಿಳಾಸ ಬದಲಿಸಿ ತಪ್ಪಿಸಿಕೊಳ್ಳುತ್ತಿದ್ದ ವಾರಂಟ್ ಆರೋಪಿ ಸೆರೆ

Update: 2023-03-25 21:05 IST

ಮಂಗಳೂರು: ಪೊಲೀಸರ ಬಂಧನ ಭೀತಿಯಿಂದ ಆಗಾಗ ವಿಳಾಸ ಬದಲಿಸಿ ತಲೆಮರೆಸಿಕೊಳ್ಳುತ್ತಿದ್ದ ಆರೋಪಿ ಬಡಕಬೈಲ್‌ನ ಅಬ್ದುಲ್ ಜಬ್ಬಾರ್ ಯಾನೆ ಫೈರೋಝ್‌ನನ್ನು ಬಜ್ಪೆ ಪೊಲೀಸರು ಬಂಟ್ವಾಳದಲ್ಲಿ ಬಂಧಿಸಿದ್ದಾರೆ.

ಆರೋಪಿಯ ವಿರುದ್ಧ ಪಾಂಡೇಶ್ವರ, ಉಳ್ಳಾಲ, ಬರ್ಕೆ ಠಾಣೆಗಳಲ್ಲಿ ಕೊಲೆಯತ್ನ, ಕಳವು, ಗಾಂಜಾ ಪ್ರಕರಣಗಳು ದಾಖಲಾಗಿತ್ತು. ಈತ ಅಲ್ಲಲ್ಲಿ ವಿಳಾಸ ಬದಲಿಸಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್‌ರ ಮಾರ್ಗದರ್ಶನದಂತೆ ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕರ ನಿರ್ದೇಶನದಂತೆ ಬಜ್ಪೆ ಇನ್‌ಸ್ಪೆಕ್ಟರ್ ಪ್ರಕಾಶ್, ಎಸ್ಸೈ ಗುರು ಕಾಂತಿ, ಪೂವಪ್ಪ, ಎಎಸ್ಸೈ ರಾಮ ಪೂಜಾರಿ, ಎಚ್‌ಸಿಗಳಾದ ರೋಹಿತ್, ಜಗದೀಶ್, ರಾಜೇಶ್, ಸಂತೋಷ್, ಸಂಜೀವ ಭಜಂತ್ರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Similar News