2ಬಿ ಮೀಸಲಾತಿ ರದ್ದುಪಡಿಸಿರುವ ಸರ್ಕಾರದ ವಿರುದ್ಧ ಕಾನೂನು ಹೋರಾಟ: ಕರ್ನಾಟಕ ಮುಸ್ಲಿಂ ಜಮಾಅತ್

Update: 2023-03-26 11:02 GMT

ಬೆಂಗಳೂರು: ಮುಸ್ಲಿಮರಿಗೆ ನೀಡಲಾಗಿದ್ದ  2B ಮೀಸಲಾತಿಯನ್ನು ರದ್ದುಪಡಿಸಿರುವ ಸರ್ಕಾರದ ನಿರ್ಧಾರದ ವಿರುದ್ದ  ಕಾನೂನು ಹೋರಾಟ ನಡೆಸಲು ಕರ್ನಾಟಕ ಮುಸ್ಲಿಂ ಜಮಾಅತ್ ತೀರ್ಮಾನಿಸಿದೆ.

ಇಂದು ಕಾನೂನು ಪರಿಣತರು ಮತ್ತು ಸಮುದಾಯದ ಮುಖಂಡರೊಂದಿಗೆ ಸರಣಿ ಸಭೆ‌ ನಡೆಸಿದ ಕರ್ನಾಟಕ ಮುಸ್ಲಿಂ ಜಮಾಅತ್ ಈ‌ ತೀರ್ಮಾನ ಕೈ ಗೊಂಡಿದೆ.

ರಾಜ್ಯ ಮುಸ್ಲಿಂ ಜಮಾಅತ್ ಕ್ಯಾಬಿನೆಟ್ ಸಭೆಯು ಈ ವಿಷಯಕ್ಕೆ ಅಂಗೀಕಾರ ನೀಡಿದ್ದು, ಮುಸ್ಲಿಂ ಜಮಾಅತ್ ರಾಜ್ಯ ‌ಉಪಾಧ್ಯಕ್ಷ ಮೌಲಾನಾ ಶಾಫಿ ಸಅದಿ ನೇತೃತ್ವದಲ್ಲಿ ಈ ಹೋರಾಟ ನಡೆಸಲಿದೆ. ಮುಸ್ಲಿಂ ಜಮಾಅತ್ ನ ಯುವಜನ ಮತ್ತು ವಿದ್ಯಾರ್ಥಿ ಘಟಕಗಳಾದ ಎಸ್ ವೈ ಎಸ್‌ ಮತ್ತು  ಎಸ್ ಎಸ್‌ ಎಫ್ ಕೂಡಾ ಈ 2B  ಮೀಸಲಾತಿ ರದ್ದತಿ ವಿರುದ್ಧ ವಿವಿಧ ಹೋರಾಟಗಳನ್ನು ಸಂಘಟಿಸಲಿದೆ ಎಂದು ಮುಸ್ಲಿಂ ಜಮಾಅತ್ ಅಧ್ಯಕ್ಷ ‌ಮಾಲಾನಾ ಮುಹಮ್ಮದ್ ಪಾಝಿಲ್ ರಝ್ವಿ‌ ಕಾವಲ್ ಕಟ್ಟೆ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಅಬೂ ಸುಫ್ಯಾನ್ ಮದನಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Similar News