ಖಾದಿ, ಕೈಮಗ್ಗ, ಕೈ ಉತ್ಪನ್ನಗಳ ಪ್ರದರ್ಶನಕ್ಕೆ ಚಾಲನೆ

Update: 2023-03-26 13:11 GMT

ಉಡುಪಿ : ಸಾಗರ ಹೆಗ್ಗೋಡು ಚರಕ ಮಹಿಳಾ ವಿವಿದ್ದೋದ್ದೇಶ ಕೈಗಾರಿಕ ಕೋಆಪರೇಟಿವ್ ಸೊಸೈಟಿಯ ಆಶ್ರಯದಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಹಯೋಗದೊಂದಿಗೆ ಉಡುಪಿ ಪಿಪಿಸಿ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಖಾದಿ, ಕೈಮಗ್ಗ ಹಾಗೂ ಕೈ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಇಂದು ಚಾಲನೆ ನೀಡಲಾಯಿತು.

ಪ್ರದರ್ಶನವನ್ನು ಖಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್ ಉದ್ಘಾಟಿಸಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಭಟ್, ಸೊಸೈಟಿಯ ವಿನ್ಯಾಸ ಮತ್ತು ಮಾರುಕಟ್ಟೆ ವ್ಯವಸ್ಥಾಪಕಿ ಪದ್ಮಶ್ರೀ ಉಪಸ್ಥಿತರಿದ್ದರು.

ಪ್ರದರ್ಶನದಲ್ಲಿ ಚರಕ ಸಂಸ್ಥೆಯ ನೈಸಗಿಕ ಬಣ್ಣದ ಪುರುಷರ ಮತ್ತು ಮಹಿಳೆ ಯರ ಉಡುಪುಗಳು, ಕೈಮಗ್ಗದ ಸೀರೆಗಳು, ವಿವಿಧ ವಿನ್ಯಾಸದ ಬ್ಯಾಗುಗಳು, ಬೆಡ್‌ಶೀಟ್, ಕೌದಿ, ಸಾವಯವ ಆಹಾರ ಪದಾರ್ಥಗಳು, ಉಪ್ಪಿನ ಕಾಯಿ, ಬೆಲ್ಲ, ಮಣ್ಣಿನ ಆಭರಣಗಳು, ಗೃಹ ಅಲಂಕಾರಿಕ ವಸ್ತುಗಳು ಹಾಗೂ ತೆಂಗಿನ ನಾರಿನಿಂದ ಮಾಡಿದ ಪಾಟ್‌ಗಳು ಇವೆ ಎಂದು ಪದ್ಮಶ್ರೀ ತಿಳಿಸಿದ್ದಾರೆ.

Similar News