ಯುವಕ ನಾಪತ್ತೆ

Update: 2023-03-27 15:49 GMT

ಮಂಗಳೂರು: ಮುಲ್ಕಿಯ ಎಸ್. ರಾವ್ ನಗರದಲ್ಲಿ ವಾಸವಾಗಿದ್ದ  ಯಾಕುಬ್ ಖಾನ್ (40) ಮಾರ್ಚ್ 19 ರಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಹರೆ: 6 ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ಸಪೂರ ಶರೀರ, ಕಾಣೆಯಾಗುವಾಗ ಕೆಂಪು ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿದ್ದರು. ಇವರು ಪತ್ತೆಯಾದಲ್ಲಿ ಮುಲ್ಕಿ ಪೊಲೀಸ್ ಠಾಣೆ ದೂ.ಸಂಖ್ಯೆ: 0824-2290533, 9480805339, 9480805332 ಮಂಗಳೂರು ನಗರ ಕಂಟ್ರೋಲ್ ರೂಂ 0824-2220800 ಸಂಪರ್ಕಿಸುವಂತೆ ಮುಲ್ಕಿ ಪೊಲೀಸ್ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News