ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು: ಹೋಳಿ ಕಾರ್ಯಕ್ರಮ ಸಂಯೋಜಕರ ಹೇಳಿಕೆ

Update: 2023-03-28 13:19 GMT

ಮಂಗಳೂರು: ಮಂಗಳೂರು ಎಜುಕೇಶನ್ ಹಬ್  ಇಲ್ಲಿ ದೇಶದ ನಾನಾ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಿದ್ದು, ಕೇವಲ ಅವರಿಗಲ್ಲದೇ, ಸಂಪೂರ್ಣವಾಗಿ ಕುಟುಂಬ ಸಮೇತರಾಗಿ ಭಾಗವಹಿಸು ವಂತಹ ರಂಗ್ ದೇ ಬರ್ಸ ಕಾರ್ಯಕ್ರಮ ವನ್ನು 5 ವರ್ಷಗಳಿಂದ ಆಯೋಜಿಸು ತ್ತಿದ್ದೇವೆ. ಆದರೆ ಈ ಬಾರಿ ಕೆಲವು ಕಿಡಿಗೇಡಿಗಳು ಕಾರ್ಯಕ್ರಮವನ್ನು ಹಾಳು ಮಾಡಿದ್ದಾರೆ. ಯಾವ ಕಾರಣಕ್ಕಾಗಿ ನಮ್ಮ ಕಾರ್ಯಕ್ರಮವನ್ನು ಹಾಳು ಮಾಡಿದ್ದಾರೆ ಎಂದು ನಮಗೆ ತಿಳಿದಿಲ್ಲ ಎಂದು ರಂಗ್ ದೇ ಬರ್ಸ ಕಾರ್ಯಕ್ರಮ ಸಂಯೋಜಕ ಜೀವನ್ ತಮಗಾಗಿರು ಅನ್ಯಾಯದ ಬಗ್ಗೆ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿ ಅವರು ಮಾತನಾಡುತ್ತಿದ್ದರು.

ಮಾ.26 ರಂದು ನಗರದ ಗರೋಡಿಯ ಸೂರ್ಯ ವುಡ್ಸ್‌ಗ್ರೌಂಡ್ಸ್ ನಲ್ಲಿ ರಂಗದೇ ಬರ್ಸ್ ಎನ್ನುವ ಹೋಳಿ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಆ ದಿನ ಮಧ್ಯಾಹ್ನ ಸುಮಾರು 1 ಗಂಟೆಯ ಹೊತ್ತಿಗೆ ಗುಂಪೊಂದು ವೇದಿಕೆ ಯತ್ತ ನುಗ್ಗಿ ವೇದಿಕೆಯಲ್ಲಿದ್ದ ಡಿಜೆ ಬಾಕ್ಸ್, ಹೋಳಿ ಹಬ್ಬದ  ಆಚರಣೆಗೆ ತಂದಿದ್ದ ಸಾಮಾಗ್ರಿಗ ಳನ್ನು  ಎಸೆದು ಹಾಳುಗೆಡವಿದ್ದಾರೆ. ಈ ಕಾರ್ಯಕ್ರಮವು 6ನೇ ವರ್ಷದ ಕಾರ್ಯಕ್ರಮವಾಗಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಪೊಲೀಸ್ ಇಲಾಖೆಯ ಸಂಪೂರ್ಣ ಅನುಮತಿ ಪಡೆದು ಕಾರ್ಯಕ್ರಮ ನಡೆಸುತ್ತಿದ್ದೇವೆ. ಅಲ್ಲದೆ ಯಾವುದೇ ಮುಚ್ಚುಮರೆ ಇಲ್ಲದೆ ಓಪನ್ ಗ್ರೌಂಡ್ನಲ್ಲಿ ಮುಕ್ತವಾಗಿ ನಡೆಸುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಕೂಡ ಹರಡುತ್ತಿದ್ದು, ಇದರಿಂದ ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದೇವೆ ಆದರೆ ಅವರು ಯಾವ ಕಾರಣಕ್ಕಾಗಿ ನಮ್ಮ ಕಾರ್ಯಕ್ರಮವನ್ನು ಹಾಳು ಮಾಡಿದ್ದಾರೆ ಎಂದು ನಮಗೆ ತಿಳಿದಿಲ್ಲ ಎಂದು ರಂಗ್ ದೇ ಬರ್ಸ ಕಾರ್ಯಕ್ರಮ ಸಂಯೋಜಕ ಜೀವನ್ ನಗರದ ಲೇಡಿಹಿಲ್ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಆಯೋಜಕರಾದ ಅರ್ಜುನ್, ಸುಜಿತ್ ಹಾಗೂ ಸಚಿನ್ ಉಪಸ್ಥಿತರಿದ್ದರು.

Similar News