ಅಂತರ ವಿವಿ ಪಂದ್ಯಾವಳಿ: ಬೆಳ್ಳಿ ಪದಕ ಪಡೆದ ಬೆಂಗಳೂರು ವಿವಿಯ ಚೈತ್ರಾ ಟಿ.

Update: 2023-03-28 18:12 GMT

ಬೆಂಗಳೂರು, ಮಾ. 28: ಪಂಜಾಬ್‍ನ ಅಮೃತಸರನ ಗುರುನಾನಕ್ ದೇವ್ ವಿವಿಯಲ್ಲಿ .24ರಿಂದ ಮಾ.26ರ ವರೆಗೆ ಆಯೋಜಿಸಲಾಗಿದ್ದು, ಪ್ರಸಕ್ತ ಸಾಲಿನ ಅಂತರ ವಿವಿ ಪಂದ್ಯಾವಳಿಯಲ್ಲಿ ಬೆಂ.ವಿವಿಯ ಕನ್ನಡ ವಿಭಾಗದ ವಿದ್ಯಾರ್ಥಿನಿ ಚೈತ್ರಾ ಟಿ. ಅವರು ‘ಪೆಂಕಾಕ್ ಸಿಲಾತ್ ಮಾರ್ಷಲ್ ಆಟ್ರ್ಸ್’ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ. 

ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ ಬೆಂಗಳೂರು ವಿವಿಯಿಂದ 15 ಕ್ರೀಡಾಪಟುಗಳು ಭಾಗವಹಿಸಿ, ಉತ್ತಮವಾದ ಪ್ರದರ್ಶನವನ್ನು ನೀಡಿದ್ದಾರೆ. ಬೆಳ್ಳಿ ಪದಕ ವಿಜೇತೆ ಚೈತ್ರ ಟಿ.ಹಿಂದಿನ ವರ್ಷವೂ ವಿಶ್ವ ವಿದ್ಯಾಲಯಕ್ಕೆ ಕಂಚಿನ ಪದಕವನ್ನು ತಂದಿದ್ದರು. ಈ ಬಾರಿಯು 80-85 ಕೆಜಿ ಟ್ಯಾಂಡಿಂಗ್ ವಿಭಾಗದಲ್ಲಿ ಬೆಂಗಳೂರು ವಿವಿಗೆ ಬೆಳ್ಳಿ ಪದಕವನ್ನು ತಂದು ವಿವಿ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ಪ್ರಕಟಣೆ ತಿಳಿಸಿದೆ.

Similar News