ಮಂಗಳೂರು: ಅಪಾರ್ಟ್‌ಮೆಂಟ್‌ನಿಂದ ಬಿದ್ದು ಟೆಕ್ನಿಶಿಯನ್ ಮೃತ್ಯು

Update: 2023-03-29 14:18 GMT

ಮಂಗಳೂರು, ಮಾ.29: ನಗರದ ಅಪಾರ್ಟ್‌ಮೆಂಟ್‌ವೊಂದರಿಂದ ಎಸಿ ಟೆಕ್ನಿಶಿಯನ್‌ವೊಬ್ಬರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ.

ಮೃತ ಟೆಕ್ನಿಶಿಯನ್‌ನನ್ನು ವಿನಯ್ ಜೋಯೆಲ್ ತಾವ್ರೋ (22) ಎಂದು ಗುರುತಿಸಲಾಗಿದೆ.

ಇವರು ಬುಧವಾರ ಸಂಜೆ ಸುಮಾರು 5.58ರ ವೇಳೆಗೆ ನಂತೂರು ಬಳಿಯಿರುವ ಮೌಂಟ್ ಟಿಯರಾ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಲ್ಲಿ ಎಸಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿದ್ದ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.

Similar News