ಪಾರದರ್ಶಕ ಚುನಾವಣೆಗೆ ಸಜ್ಜಾಗಲು ದ.ಕ. ಜಿಪಂ ಸಿಇಒ ಡಾ.ಕುಮಾರ್ ಕರೆ

Update: 2023-03-30 14:17 GMT

ಮಂಗಳೂರು: ಚುನಾವಣಾ ಕಾರ್ಯದಲ್ಲಿ ಭಾವನಾತ್ಮಕ ವಿಚಾರಕ್ಕೆ ಅವಕಾಶವಿಲ್ಲ. ಕೆಲಸಕ್ಕೆ ಮಾತ್ರ ಆದ್ಯತೆ ನೀಡಬೇಕು. ಹಾಗಾಗಿ ಚುನಾವಣಾ ಕರ್ತವ್ಯದಲ್ಲಿ ಸಕ್ರಿಯವಾಗಿ ಭಾಗಿಯಾಗುವುದೇ ಹೆಮ್ಮೆಯ ವಿಚಾರ ಎಂದು ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಯೂ ಆಗಿರುವ ದ.ಕ.ಜಿಪಂ ಸಿಇಒ ಡಾ.ಕುಮಾರ್ ಹೇಳಿದರು.

ನಗರದ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಚುನಾವಣೆಯ ಪೂರ್ವಸಿದ್ಧತೆಗಳ ಬಗ್ಗೆ ಚರ್ಚಿಸಲು ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ಸಾಕಷ್ಟು ಚುನಾವಣಾ ಕಾರ್ಯ ನಿರ್ವಹಿಸಿ, ಅನುಭವ ಪಡೆದಿದ್ದರೂ ಪ್ರತಿಯೊಂದು ಚುನಾವಣೆಯು ಹೊಸತಾಗಿರುತ್ತದೆ. ಅಲ್ಲಿ ಸಾಕಷ್ಟು ಹೊಸ ಸಂಗತಿಗಳಿರುತ್ತವೆ. ಚುನಾವಣಾ ಆಯೋಗದಿಂದ ಬರುವ ನಿರ್ದೇಶನಗಳು, ಕೆಲವೊಂದು ಘಟನೆಗಳು ವಿಭಿನ್ನವಾಗಿರುತ್ತದೆ. ಅದನ್ನು ಅರಿತು ಮುಂದಿನ 45 ದಿನದೊಳಗೆ ಯಾವುದೇ ಆತಂಕ, ಉದ್ವೇಗಕ್ಕೆ ಒಳಗಾಗದೆ ವಾರಿಯರ್ ರೀತಿ ಕೆಲಸ ಮಾಡಬೇಕು. ಮುಕ್ತ ಹಾಗೂ ಪಾರದರ್ಶಕ ಚುನಾವಣೆಗೆ ಪ್ರತಿಯೊಬ್ಬರು ಸಜ್ಜಾಗಬೇಕು ಎಂದು ಡಾ.ಕುಮಾರ್ ತಿಳಿಸಿದರು.

ಸಭೆಯಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು, ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿ, ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

Similar News