ಮಣಿಪಾಲ: ಅಪಾರ್ಟ್‌ಮೆಂಟ್ ಬಾಲ್ಕನಿಯಿಂದ ಬಿದ್ದು ವೃದ್ಧ ಮೃತ್ಯು

Update: 2023-03-31 13:53 GMT

ಮಣಿಪಾಲ, ಮಾ.31: ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಬಿದ್ದು ವೃದ್ಧರೊಬ್ಬರು ಮೃತಪಟ್ಟ ಘಟನೆ ಮಾ.30ರಂದು ರಾತ್ರಿ ವೇಳೆ ಮಣಿಪಾಲದ ಈಶ್ವರನಗರ ಎಂಬಲ್ಲಿ ನಡೆದಿದೆ.

ಮೃತರನ್ನು ಮಣಿಪಾಲದ ಈಶ್ವರನಗರದಲ್ಲಿರುವ ಮಹೇಶ್ವರಿ ಆಪಾರ್ಟ್ ಮೆಂಟ್ ನಿವಾಸಿ ಸದಾಶಿವ ಕಾಮತ್ (81) ಎಂದು ಗುರುತಿಸಲಾಗಿದೆ.

ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಇವರು, ಇದೇ ಕಾರಣದಿಂದ ಅಥವಾ ಬೇರೆ ಕಾರಣದಿಂದ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಬಿದ್ದು  ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News