ಉನ್ನತ ಶಿಕ್ಷಣದಲ್ಲಿ ಆಗಬೇಕಾದುದೇನು?

Update: 2023-04-01 06:56 GMT

►► ಸರಣಿ-7 | ಭಾಗ- 02

ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ

► ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದ್ದರೂ ಜನ ಪ್ರಣಾಳಿಕೆಯು ಈ ಬಂಡವಾಳಶಾಹಿ ಪ್ರೇರಿತ ಶಿಕ್ಷಣ ವ್ಯವಸ್ಥೆಯನ್ನು ತಿರಸ್ಕರಿಸುತ್ತದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಕೆಜಿಯಿಂದ ಪಿಜಿವರೆಗೆ ಉಚಿತ, ಕಡ್ಡಾಯ ಗುಣಮಟ್ಟದ ಶಿಕ್ಷಣ ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸುತ್ತದೆ.

► ವಂಚಿತ ಸಮುದಾಯಗಳಿಗೆ ಶಿಕ್ಷಣದಿಂದ ಹೊರಗುಳಿಯುವಂತಹ ನೀತಿಗಳನ್ನುಳ್ಳ, ಉನ್ನತ ಶಿಕ್ಷಣವನ್ನು ವ್ಯಾಪಾರೀಕರಣ, ಕೇಂದ್ರೀಕರಣಗೊಳಿಸುವ ಹೊಸ ಶಿಕ್ಷಣ ನೀತಿಯನ್ನು (ಎನ್ಇಪಿ 2020) ಜಾರಿಗೊಳಿಸಬಾರದು.

► ಶಿಕ್ಷಣ ತಜ್ಞ ಜಾನ್ ಡ್ಯೂವೆ ಹೇಳಿದಂತೆ ಶಿಕ್ಷಣದಲ್ಲಿ ಸಾರ್ವಜನಿಕ ಬಿಕ್ಕಟ್ಟುಗಳು ಎಂದರೆ ಅದು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎಂದು ಪರಿಗಣಿಸಬೇಕು.

► ಕ್ಯಾಂಪಸ್ ಪ್ರಜಾಪ್ರಭುತ್ವಕ್ಕೆ ಮೊದಲ ಆದ್ಯತೆ ಕೊಡಬೇಕು

► ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡಬಾರದು.

►  ಶಿಕ್ಷಕರ ಉತ್ತರದಾಯಿತ್ವವನ್ನು ನಿಗದಿತವಾಗಿ ಮೌಲ್ಯಮಾಪನ ನಡೆಸಲಾಗುವುದು.

► ಇಂದಿಗೂ ವಂಚಿತ ಸಮುದಾಯಗಳ ಮೊದಲ ತಲೆಮಾರು ಶಿಕ್ಷಣ ಪಡೆಯುತ್ತಿದ್ದಾರೆ. ಧರ್ಮ, ಲಿಂಗ, ಬಡತನ ಮುಂತಾದ ಕಾರಣಗಳಿಂದ ದಲಿತ, ತಳ ಸಮುದಾಯ, ಮುಸ್ಲಿಮ್ಸಮುದಾಯಗಳ ವಿದ್ಯಾರ್ಥಿಗಳು ಪದವಿ ಹಂತದಲ್ಲಿಯೇ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ.

► ವಂಚಿತ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ಹೊರಗುಳಿಯದಂತಹ ವ್ಯವಸ್ಥೆ ರೂಪಿಸುವುದು ಮೊದಲ ಆದ್ಯತೆಯಾಗಿರುತ್ತದೆ. ಇದಕ್ಕಾಗಿ ಅಗತ್ಯವಿರುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಲಾಗುವುದು ಮತ್ತು ಸಂಪನ್ಮೂಲ ಕ್ರೋಡೀಕರಣಕ್ಕೆ ಮೊದಲ ಆದ್ಯತೆ ಕೊಡಲಾಗುವುದು. 

► ಪದವಿ, ಸ್ನಾತಕ್ಕೋತ್ತರ ವ್ಯಾಸಂಗದಲ್ಲಿ ದಾಖಲಾತಿ ಪ್ರಮಾಣವನ್ನು ಅದರಲ್ಲಿಯೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದಾಖಲಾತಿಯನ್ನು ಹೆಚ್ಚಿಸಲು ಅಗತ್ಯವಾದ ಶೈಕ್ಷಣಿಕ ವ್ಯವಸ್ಥೆಯನ್ನು ಕಟ್ಟಲಾಗುವುದು.

► ದಲಿತ ವಿದ್ಯಾರ್ಥಿಗಳು ಕ್ಯಾಂಪಸ್ಗಳಲ್ಲಿ ಜಾತಿ ತಾರತಮ್ಯಕ್ಕೆ, ದೌರ್ಜನ್ಯಕ್ಕೆ ಒಳಗಾಗದಂತಹ ವ್ಯವಸ್ಥೆ ಕಲ್ಪಿಸಬೇಕು. ಉಪಕುಲಪತಿಗಳು, ಡೀನ್ಗಳು, ವಿಭಾಗ ಮುಖ್ಯಸ್ಥರು, ವಿದ್ಯಾರ್ಥಿ ಸಂಘಟನೆಗಳ ಮುಖಂಡರನ್ನು ಒಳಗೊಂಡ ತಾರತಮ್ಯ ವಿರೋಧಿ ಸಮಿತಿಯನ್ನು ರಚಿಸಬೇಕು. ಈ ಸಮಿತಿ ತಿಂಗಳಿಗೆ ಎರಡು ಬಾರಿ ಸಭೆ ನಡೆಸಬೇಕು ಮತ್ತು ದಿನನಿತ್ಯದ ವಿದ್ಯಮಾನಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಉನ್ನತ ಶಿಕ್ಷಣ ಸಚಿವರು ತಿಂಗಳಿಗೆ ಒಂದು ಬಾರಿ ಈ ಸಮಿತಿಯೊಂದಿಗೆ ಸಮಾಲೋಚನೆ ನಡೆಸಬೇಕು. ಮುಖ್ಯಮಂತ್ರಿಗಳು ಇದನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ನಡೆಸಬೇಕು ಎನ್ನುವ ಮಾರ್ಗಸೂಚಿಗಳನ್ನು ನೀಡಬೇಕು. ಇದನ್ನು ಶಾಸನಬದ್ಧವಾಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

► ಕ್ಯಾಂಪಸ್ನಲ್ಲಿ ಜಾತಿ ದೌರ್ಜನ್ಯ ನಡೆಸುವ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು.  

► ರೋಹಿತ್ ಕಾಯ್ದೆಯನ್ನು ಸಂಸತ್ತಿನಲ್ಲಿ ಅನುಮೋದಿಸುವಂತೆ ಕೇಂದ್ರ ಸರಕಾರಕ್ಕೆ ಹಕ್ಕೊತ್ತಾಯ ಮಾಡಬೇಕು. ಇತರ ರಾಜ್ಯ ಸರಕಾರಗಳೊಂದಿಗೆ ಈ ಕುರಿತು ಸಮಾಲೋಚನೆ ನಡೆಸಬೇಕು

ಸಮಗ್ರ ಶಿಕ್ಷಣ ವ್ಯವಸ್ಥೆ

► ಯುಜಿಸಿಯ ನೀತಿ ನಿಯಮಾವಳಿಗಳಲ್ಲಿ, ಅದರ ಆಡಳಿತದಲ್ಲಿನ ಲೋಪದೋಷಗಳನ್ನು, ಮಿತಿಗಳನ್ನು ಸರಿಪಡಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರ ಶಿಕ್ಷಣ ಇಲಾಖೆಗೆ ಹಕ್ಕೊತ್ತಾಯ ಮಾಡಬೇಕು. ಈ ಕುರಿತು ಇತರ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕು.

► ಭಾರತೀಯ ಉನ್ನತ ಶಿಕ್ಷಣ ಆಯೋಗದ ಸ್ಥಾಪನೆಯ ನಿರ್ಧಾರವು ಶಿಕ್ಷಣವನ್ನು ಕೇಂದ್ರೀಕರಣಗೊಳಿಸುವುದರಿಂದ ಆ ಯೋಜನೆಯನ್ನು ಕೈಬಿಡಬೇಕೆಂದು ಕೇಂದ್ರ ಶಿಕ್ಷಣ ಇಲಾಖೆಗೆ ಹಕ್ಕೊತ್ತಾಯ ಮಾಡಬೇಕು. ಈ ಕುರಿತು ಇತರ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕು.

► ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್ಸಿಎಫ್) 2022 ರಚನೆಯಲ್ಲಿ ಜಾತಿವಾದ, ಚಾತುರ್ವರ್ಣ ವ್ಯವಸ್ಥೆ ಮತ್ತು ಮತೀಯವಾದಕ್ಕೆ ಪೂರಕವಾದ ಪಠ್ಯಕ್ರಮಕ್ಕೆ ಅವಕಾಶ ಕಲ್ಪಿಸಬಾರದು ಮತ್ತು ಸಂವಿಧಾನಕ್ಕೆ ಬದ್ಧವಾಗಿರಬೇಕೆಂದು ಕೇಂದ್ರಕ್ಕೆ ಹಕ್ಕೊತ್ತಾಯ ಮಾಡಬೇಕು. 

► ಲಿಬರಲ್ ಆರ್ಟ್ ಮಾದರಿಗೆ ಪೂರಕವಾದಂತಹ ಶೈಕ್ಷಣಿಕ ವ್ಯವಸ್ಥೆ ಇಲ್ಲದಿರುವುದರಿಂದ ರಾಜ್ಯ ವಿವಿಗಳಲ್ಲಿ ಸದ್ಯಕ್ಕೆ ಅದನ್ನು ಜಾರಿಗೊಳಿಸಬಾರದು. ಆದರೆ ಉದ್ಯೋಗ ಮಾರುಕಟ್ಟೆಗೆ ಪೂರಕವಾಗುವಂತೆ ಮತ್ತು ವಿದ್ಯಾರ್ಥಿಗಳ ವಿವಿಧ ಜ್ಞಾನ ಶಾಖೆಗಳ ಕಲಿಕೆಗೂ ಅಡ್ಡಿಯಾಗದಂತೆ ಈಗಿರುವ ಶೈಕ್ಷಣಿಕ ವ್ಯವಸ್ಥೆಯನ್ನು ಬದಲಿಸಲು ನೀಲನಕ್ಷೆ ರೂಪಿಸಬೇಕು. ನಂತರ ಹಂತಹಂತವಾಗಿ ಜಾರಿಗೊಳಿಸಬೇಕು.

► ಇಲ್ಲಿನ ಅಸಮಾನತೆ, ಶೈಕ್ಷಣಿಕ ವ್ಯವಸ್ಥೆಯಲ್ಲಿನ ಬಿಕ್ಕಟ್ಟುಗಳು ಮತ್ತು ಗುಣಮಟ್ಟದ ಶಿಕ್ಷಣದ ಕೊರತೆಗಳನ್ನು ಗಮನದಲ್ಲಿಟ್ಟುಕೊಂಡು ನಾಲ್ಕು ವರ್ಷಗಳ ಪದವಿ-ಸ್ನಾತಕೋತ್ತರ ಶಿಕ್ಷಣ, ಪ್ರವೇಶ-ನಿರ್ಗಮನ ಪದ್ಧತಿಯ ಸಾಧಕ ಬಾಧಕಗಳನ್ನು ಕುರಿತು ವರದಿ ಸಲ್ಲಿಸಲು ಶಿಕ್ಷಣ ತಜ್ಞರು ಮತ್ತು ಶಿಕ್ಷಣದ ಭಾಗೀದಾರರನ್ನು ಒಳಗೊಂಡ ತಜ್ಞರ ಸಮಿತಿಯನ್ನು ರಚಿಸಬೇಕು. ಅದರ ಶಿಫಾರಸುಗಳನ್ನು ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ಪ್ರಸಕ್ತ ಶಿಕ್ಷಣ ವ್ಯವಸ್ಥೆಯನ್ನು ಮುಂದುವರಿಸಬೇಕು

► ಜಾಗತೀಕರಣಗೊಂಡ ಸಾಮಾಜಿಕ ಮತ್ತು ಆರ್ಥಿಕತೆಯ ಶೀಘ್ರಗತಿಯಲ್ಲಿ ಜ್ಞಾನ ಎನ್ನುವುದು ಚಾಲಕ ಶಕ್ತಿಯಾಗಿದೆ. ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳಿ ಎನ್ನುವುದು ಮುಕ್ತ ಮಾರುಕಟ್ಟೆಯ ಭಾಷೆ. ಆದರೆ ಇಲ್ಲಿನ ವ್ಯವಸ್ಥೆಯಲ್ಲಿ ಕೇವಲ ಶೋಷಿತ ಸಮುದಾಯಗಳಿಗೆ ಸವಾಲುಗಳಿವೆ ಮತ್ತು ಅನುಕೂಲವಂತರಿಗೆ ಅವಕಾಶಗಳಿವೆ. ಇದನ್ನು ಆಮೂಲಾಗ್ರವಾಗಿ ಬದಲಿಸಿ ವಂಚಿತರಿಗೆ ಅವಕಾಶ ದೊರಕುವಂತಹ ಜ್ಞಾನ ಕಲಿಕೆಯ ಶಿಸ್ತನ್ನು ಅಳವಡಿಸಿಕೊಳ್ಳಲು ಅಗತ್ಯವಾದ ನೀಲನಕ್ಷೆಯನ್ನು ರೂಪಿಸಬೇಕು.

► ಜ್ಞಾನಾರ್ಜನೆ, ವಿವಿಧ ಜ್ಞಾನ ಶಾಖೆಗಳ ಕಲಿಕೆ, ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗವು ಉನ್ನತ ಶಿಕ್ಷಣದ ಮುಖ್ಯ ಉದ್ದೇಶವೆಂದು ಖಚಿತವಾಗಿ ನಂಬಿದ್ದೇವೆ. ಪ್ರಚಲಿತ ಉದ್ಯೋಗ ಮಾರುಕಟ್ಟೆಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸೂಕ್ತ ಮಾರ್ಪಾಟು ಮಾಡಿಕೊಳ್ಳಲು ತಜ್ಞರ ಸಮಿತಿ ನೇಮಕ ಮಾಡಿಕೊಳ್ಳಬೇಕು. ಆದರೆ ಎಲ್ಲಿಯೂ ಶಿಕ್ಷಣದ ಗುಣಮಟ್ಟದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದಂತೆ ಎಚ್ಚರ ವಹಿಸಬೇಕು

► ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್ಎಂಎಸ್)ಯ ಸಾಧಕ ಬಾಧಕಗಳನ್ನು ಪರಿಶೀಲಿಸಬೇಕು. ಈ ವ್ಯವಸ್ಥೆಯನ್ನು ಕಲಿಕೆಗೆ ಪೂರಕವಾಗಿ ಮಾತ್ರ ಬಳಸಿಕೊಳ್ಳಬೇಕು. 
ಕ್ಲಾಸ್ರೂಂ ಶಿಕ್ಷಣವೇ ಅಂತಿಮ ಎಂದು ಪರಿಗಣಿಸಬೇಕು. ಆನ್ಲೈನ್ ಶಿಕ್ಷಣಕ್ಕೆ ಆದ್ಯತೆ ಕೊಡಬಾರದು. ಕೇವಲ ಪೂರಕ ಕಲಿಕೆಯರಿಮೆಯಾಗಿ ಆನ್ಲೈನ್ ಶಿಕ್ಷಣವನ್ನು ಜಾರಿಗೊಳಿಸಬೇಕು.  

► ಖಾಯಂ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳುವ ಸಿಇಟಿ ಪ್ರಕ್ರಿಯೆಯನ್ನು ಪಾಲಿಸದೆ ನೇರವಾಗಿ ಉದ್ಯಮದಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಪರಿಣಿತ ಅಧ್ಯಾಪಕರು ಎಂದು ನೇರ ನೇಮಕಾತಿ ಮಾಡಿಕೊಳ್ಳುವುದನ್ನು ರದ್ದುಪಡಿಸಬೇಕು. ಇದು ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿದೆ ಮತ್ತು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ.

► ಮಾನವಿಕ ವಿಷಯಗಳಲ್ಲಿ (ಭಾಷೆ, ಇತಿಹಾಸ, ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ ಇತ್ಯಾದಿ) ತಳಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ವೃತ್ತಿಪರ ಕೋರ್ಸ್ಗಳಲ್ಲಿ (ಇಂಜಿನಿಯರಿಂಗ್, ವೈದ್ಯಕೀಯ, ಮಾಹಿತಿ ತಂತ್ರಜ್ಞಾನ) ತುಂಬಾ ಕಡಿಮೆ ಪ್ರಮಾಣದಲ್ಲಿ ದಾಖಲಾಗುತ್ತಿದ್ದಾರೆ. ಇದಕ್ಕೆ ನಾನಾ ಕಾರಣಗಳಿವೆ. ಈ ಕಾರಣಗಳನ್ನು ಪತ್ತೆ ಹಚ್ಚಿ ಅಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ದಲಿತ, ಮುಸ್ಲಿಮ್ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಅರ್ಥಶಾಸ್ತ್ರ ವಿಭಾಗಗಳಲ್ಲಿ ವ್ಯಾಸಂಗ ಮಾಡುವಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

► ಜಾಗತೀಕರಣದ ನಂತರದ 21ನೇ ಶತಮಾನದ ಮೊದಲ ದಶಕದಲ್ಲಿ ಸೇವಾ ವಲಯಕ್ಕೆ ದಿಢೀರನೆ ಬೇಡಿಕೆ ಪ್ರಾರಂಭವಾಯಿತು. ಇದು ಉದ್ಯೋಗ ವ್ಯವಸ್ಥೆಯಲ್ಲಿ ಅಸಮಾನತೆಯ ಸೃಷ್ಟಿಗೆ ಕಾರಣವಾಯಿತು. ಆದರೆ ಇಂತಹ ಬೆಳವಣಿಗೆಗಳಿಗೆ ಪ್ರೋತ್ಸಾಹ ಕೊಡಬಾರದು.

► ವಿಷಯಗಳಲ್ಲಿನ ಜ್ಞಾನದ ಕುರಿತು ಭೇದಭಾವ ನೀತಿ ಪ್ರಕಟಿಸಬಾರದು. ಇಂಜಿನಿಯರಿಂಗ್, ವೈದ್ಯಕೀಯ, ಮಾಹಿತಿ ತಂತ್ರಜ್ಞಾನದಷ್ಟೇ ಇತಿಹಾಸ, ಭಾಷೆ, ಸಮಾಜ ವಿಜ್ಞಾನ, ರಾಜಕೀಯ ಶಾಸ್ತ್ರ, ಜನಪದ, ವಿಜ್ಞಾನ, ಸಂಗೀತ, ನಾಟಕ ತರಹದ ಮಾನವಿಕ ವಿಭಾಗಗಳು ಸಹ ಮುಖ್ಯವಾದ ಜ್ಞಾನ ಪ್ರಕಾರಗಳಾಗಿವೆ. ತಾಂತ್ರಿಕ ಶಿಕ್ಷಣ ಮತ್ತು ಮಾನವಿಕ ಶಿಕ್ಷಣದ ನಡುವೆ ತಾರತಮ್ಯ ಮಾಡುವುದು ಅಪರಾಧ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯೆಂದು ಪರಿಗಣಿಸಬೇಕು. ಎಲ್ಲಾ ವಿಷಯಗಳಿಗೂ ಸಮಾನ ಪ್ರಾಮುಖ್ಯತೆ ಕಲ್ಪಿಸುವ ಜವಾಬ್ದಾರಿ, ಉತ್ತರದಾಯಿತ್ವದಿಂದ ನುಣಿಚಿಕೊಳ್ಳಬಾರದು. ಈಗಾಗಲೇ ನಡೆದ ತಪ್ಪುಗಳನ್ನು ಸರಿಪಡಿಸಿಕೊಂಡು ಎಲ್ಲಾ ಬಗೆಯ ಜ್ಞಾನ ಶಾಖೆಗಳಿಗೂ ಸಮಾನ ಮಹತ್ವ ಕಲ್ಪಿಸಲಾಗುವುದು.

► ಉದ್ಯೋಗ ದೊರಕುವ ನೆಪದಲ್ಲಿ ಕೋರ್ಸ್ಗಳನ್ನು ಬ್ರಾಂಡ್ ಮಾಡುವುದನ್ನು ಸ್ಥಗಿತಗೊಳಿಸಬೇಕು.

► ಮಾರುಕಟ್ಟೆ ಅಸ್ಥಿರತೆಯು ಯುವಜನತೆಯ ಉದ್ಯೋಗಾವಕಾಶದ ಮೇಲೆ ಪರಿಣಾಮ ಬೀರದಂತೆ ಯಾವುದೇ ವಿಷಯವನ್ನು ಕಲಿತರೂ ಉದ್ಯೋಗ ದೊರಕುವಂತಹ ಪರ್ಯಾಯ ಉದ್ಯೋಗ ಸೃಷ್ಟಿಗೆ ಹಣಕಾಸು ಇಲಾಖೆ ಮತ್ತು ಇತರ ಸಂಬಂಧಿತ ಇಲಾಖೆಗಳೊಂದಿಗೆ ಜಂಟಿ ಕ್ರಿಯಾ ಸಮಿತಿ ರಚಿಸಬೇಕು.

► ಪದವಿ ಮತ್ತು ಕೌಶಲ್ಯ ತರಬೇತಿ ಎರಡನ್ನು ಪ್ರತ್ಯೇಕವಾಗಿಸುವ ವ್ಯಾಸಂಗ ಕ್ರಮವನ್ನು (ಪೆಡಗಾಜಿ) ರದ್ದುಗೊಳಿಸಬೇಕು. 

► ಸಂಶೋಧನೆ ಮತ್ತು ಅಧ್ಯಯನಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗುವುದು. ಸಂಶೋಧನೆಯ ಗುಣಮಟ್ಟವನ್ನು ಕಾಪಾಡಿಕೊಂಡು ಬರಬೇಕು. ಈ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಾರದು.

► ಬೋಧನೆ ಮತ್ತು ಸಂಶೋಧನೆ ಎರಡೂ ವಿದ್ಯಾರ್ಥಿ ಕೇಂದ್ರಿತವಾಗಿರುವಂತಹ ವ್ಯವಸ್ಥೆ ರೂಪಿಸಲಾಗುವುದು.

► ಬಹುಶಿಸ್ತೀಯ, ಅಂತರ್ ಶಿಸ್ತೀಯ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಈ ಮಾದರಿ ಶಿಕ್ಷಣಕ್ಕೆ ಅಗತ್ಯವಾದ ಪಠ್ಯಕ್ರಮ, ಪಠ್ಯಪುಸ್ತಕ, ವ್ಯಾಸಂಗ ಕ್ರಮ, ಸುಸಜ್ಜಿತ ಗ್ರಂಥಾಲಯ, ಆಧುನಿಕ ತಂತ್ರಜ್ಞಾನ ಮತ್ತು ಶಿಕ್ಷಕರ ಕೊರತೆ ಇರದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.

► ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿ:ಶಿಕ್ಷಕರ ಅನುಪಾತವನ್ನು ಕನಿಷ್ಠ 20:1ಕ್ಕೆ ಸಾಧಿಸಲು ಶಿಕ್ಷಕರ ನೇಮಕಾತಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

► ಅತಿಥಿ ಉಪನ್ಯಾಸಕರಿಗೆ ಅವರ ಬೋಧನಾ ಅನುಭವಕ್ಕೆ ಅನುಗುಣವಾಗಿ ವೇತನ ನಿಗದಿಪಡಿಸಬೇಕು. ಅವರು ಯಾವುದೇ ಬಗೆಯಲ್ಲಿ ಶೋಷಣೆಗೆ ಒಳಗಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

► ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ಹುದ್ದೆ ನೇಮಕಾತಿಯಲ್ಲಿ ಯುಜಿಸಿ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸಾಮಾಜಿಕ ನ್ಯಾಯ, ಶೈಕ್ಷಣಿಕ ಅನುಭವಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಈಗಿರುವ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು. 

► ಪಠ್ಯಗಳ ಆಯ್ಕೆ ಮತ್ತು ಪಠ್ಯಪುಸ್ತಕಗಳ ರಚನೆಯಲ್ಲಿ ಮತೀಯವಾದ, ಬ್ರಾಹ್ಮಣಶಾಹಿ ಮತ್ತು ವಿರೂಪಗೊಂಡ, ಪೂರ್ವಗ್ರಹಪೀಡಿತ ಇತಿಹಾಸಕ್ಕೆ ಯಾವುದೇ ಸಂದರ್ಭದಲ್ಲಿಯೂ ಅವಕಾಶ ಕೊಡಬಾರದು. 

► ಪಠ್ಯಗಳ ಆಯ್ಕೆ ಮತ್ತು ಪಠ್ಯಪುಸ್ತಕಗಳ ರಚನಾ ಸಮಿತಿಗೆ ವಿಷಯ ತಜ್ಞರ, ಜಾತ್ಯತೀತ ಒಲವುಳ್ಳವರನ್ನು ಆಯ್ಕೆ ಮಾಡಬೇಕು.

► ವೈದ್ಯಕೀಯ ಶಿಕ್ಷಣದಲ್ಲಿ ಅಸಮಾನತೆ ಸೃಷ್ಟಿಸುವ ನೀಟ್ ಸ್ಪರ್ಧಾತ್ಮಕ ಪರೀಕ್ಷಾ ಪದ್ಧತಿಯನ್ನು ರದ್ದುಗೊಳಿಸಿ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆ ನಡೆಸಲು ತೀರ್ಮಾನಿಸಬೇಕು. ಆದರೆ ಅದನ್ನು ರದ್ದುಗೊಳಿಸಲು ಅಡ್ಡಿಯಾಗುವ ಕಾನೂನು ತೊಡಕುಗಳ ಕುರಿತು, ಸಾಂವಿಧಾನಿಕ ಅಧಿಕಾರದ ಕುರಿತು ಕಾನೂನು ತಜ್ಞರೊಂದಿಗೆ, ತಮಿಳುನಾಡಿನ ಸರಕಾರದೊಂದಿಗೆ ಸಮಾಲೋಚನೆ ನಡೆಸಬೇಕು. ಮುಖ್ಯವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು.

ಹಣಕಾಸು ಹಂಚಿಕೆ

► ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಣಕಾಸು ಹಂಚಿಕೆ, ಎನ್ಜಿಒಗಳು ಮತ್ತು ಇತರ ದಾನಿಗಳ ಅನುದಾನ, ಸಾಲ ವ್ಯವಸ್ಥೆಗಳ ಮೇಲೆ ಉನ್ನತ ಶಿಕ್ಷಣವು ಅವಲಂಬಿತವಾಗಿದೆ. 

► ರಾಜ್ಯದ ಬಜೆಟ್ ವೆಚ್ಚದ ಸರಾಸರಿ ಶೇ.11.5ರಷ್ಟು, ಜಿಡಿಪಿಯ ಶೇ.2.5ರಷ್ಟು ಶಿಕ್ಷಣಕ್ಕೆ ಹಂಚಿಕೆ ಮಾಡಲಾಗುತ್ತದೆ. ಈ ಹಂಚಿಕೆಯಲ್ಲಿ ಉನ್ನತ ಶಿಕ್ಷಣಕ್ಕೆ ಶೇ.12ರಷ್ಟು ಹಂಚಿಕೆ ಮಾಡಬೇಕು. ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಬಜೆಟ್ ವೆಚ್ಚದ ಶೇ.24ರಷ್ಟು ಮತ್ತು ಜಿಡಿಪಿಯ ಶೇ.6ರಷ್ಟು ಹೆಚ್ಚಿಸಬೇಕು. 

► ಯುಜಿಸಿ ಅನುದಾನದಲ್ಲಿ ಶೇ.65ರಷ್ಟು ಕೇಂದ್ರೀಯ ವಿವಿಗಳಿಗೆ ಶೇ.35ರಷ್ಟು ರಾಜ್ಯ ವಿವಿಗಳಿಗೆ ಹಂಚಿಕೆಯಾಗುತ್ತದೆ. ಆದರೆ ರಾಜ್ಯಗಳ ಅನುದಾನವನ್ನು ಕನಿಷ್ಠ ಶೇ.50ಕ್ಕೆ ಹೆಚ್ಚಿಸಬೇಕೆಂದು ಕೇಂದ್ರ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಬೇಕು.

► ಶೇ.4ರಷ್ಟಿರುವ ಶಿಕ್ಷಣ ಸೆಸ್ನ ಅರ್ಧ ಭಾಗವನ್ನು ಉನ್ನತ ಶಿಕ್ಷಣಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರಕಾರಕ್ಕೆ ಹಕ್ಕೊತ್ತಾಯ ಮಾಡಬೇಕು. ಈ ಕುರಿತು ಇತರ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕು.

► 2013ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (ರೂಸ) ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯಗಳು 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಬೇಕು. ಈ ಮೊತ್ತವನ್ನು ರಾಜ್ಯ ಕಾಲೇಜು, ವಿವಿಗಳ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕ ಮುಂತಾದವುಗಳಿಗೆ ಬಳಸಿಕೊಳ್ಳಬೇಕು. ಆದರೆ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೇಂದ್ರ ಸರಕಾರವು ವಿಫಲವಾಗಿದೆ. ಈ ಕೂಡಲೇ ರೂಸದ ಮೂಲಕ ಕೇಂದ್ರ ಸರಕಾರವು ನಿಗದಿತವಾಗಿ ಆರ್ಥಿಕ ಅನುದಾನವನ್ನು ಹಂಚಿಕೆ ಮಾಡಬೇಕು ಮತ್ತು ಅದನ್ನು ರಾಜ್ಯಗಳಿಗೆ ಒದಗಿಸಬೇಕು ಎಂದು ಹಕ್ಕೊತ್ತಾಯ ಮಾಡಬೇಕು.

► ಕೇಂದ್ರ ಸರಕಾರದ ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿ (ಹೆಫಾ) ಮೂಲಕವು ಅನುದಾನವನ್ನು ಪಡೆದುಕೊಳ್ಳಬೇಕು ಮತ್ತು ಈ ಅನುದಾನವನ್ನು ನಿಗದಿತವಾಗಿ ಹಂಚಿಕೆ ಮಾಡುವಂತೆ ಕೇಂದ್ರಕ್ಕೆ ಒತ್ತಾಯಿಸಬೇಕು.

► ರಾಜ್ಯಕ್ಕೆ ನೇರವಾಗಿ ಬರುವ ಎಸ್ಜಿಎಸ್ಟಿನಲ್ಲಿ ಶೇ.5ರಷ್ಟು ಉನ್ನತ ಶಿಕ್ಷಣಕ್ಕೆ ಹಂಚಿಕೆ ಮಾಡಬೇಕು.

► ದೇಶದ ಅತಿಶ್ರೀಮಂತರಿಗೆ ಶೇ.2ರಷ್ಟು ಸಂಪತ್ತು ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಯನ್ನು ಶೇ.22ರಿಂದ ಶೇ.30ಕ್ಕೆ ಹೆಚ್ಚಿಸಬೇಕು ಮತ್ತು ಅದರ ಒಂದು ಭಾಗವನ್ನು ಉನ್ನತ ಶಿಕ್ಷಣಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರಕಾರಕ್ಕೆ ಹಕ್ಕೊತ್ತಾಯ ಮಾಡಬೇಕು. ಈ ಕುರಿತು ಇತರ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕು.

► ಸರ್ಚಾರ್ಜ್ ತೆರಿಗೆಯಿಂದ ಬರುವ ಮೊತ್ತದ ಸಣ್ಣ ಭಾಗವನ್ನು ಉನ್ನತ ಶಿಕ್ಷಣಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರಕಾರಕ್ಕೆ ಹಕ್ಕೊತ್ತಾಯ ಮಾಡಬೇಕು. ಈ ಕುರಿತು ಇತರ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕು.

► ಸ್ಥಳೀಯ ಸಂಸ್ಥೆಗಳು ಸಂಗ್ರಹಿಸಿದ ತೆರಿಗೆಯ ಅಲ್ಪಭಾಗವನ್ನು ಉನ್ನತ ಶಿಕ್ಷಣಕ್ಕೆ ಹಂಚಿಕೆ ಮಾಡುವಂತೆ ವ್ಯವಸ್ಥೆ ಮಾಡಬೇಕು.

► ಸಂಶೋಧನೆ ಮತ್ತು ಅಧ್ಯಯನ, ವಿದ್ಯಾರ್ಥಿ ವೇತನಕ್ಕಾಗಿ ಎನ್ಸಿಟಿಇ, ಸಿಎಸ್ಐಆರ್, ಡಿಇಸಿ, ಎನ್ಸಿಆರ್ಐ, ಎಸ್ಸಿಎಎಚ್ಇ ಮುಂತಾದ ಶಾಸನಬದ್ಧ ವೃತ್ತಿಪರ ಕೌನ್ಸಿಲ್ಗಳ ಮೂಲಕ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಅನುದಾನವನ್ನು ನಿಗದಿತ ಸಮಯದಲ್ಲಿ ಹಂಚಿಕೆ ಮಾಡುವಂತೆ ಕ್ರಮ ತೆಗೆದುಕೊಳ್ಳಬೇಕು.

► ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸ್ವಲ್ಪಪ್ರಮಾಣದ ಅನುದಾನವನ್ನು ಪಡೆದುಕೊಳ್ಳಬೇಕು.

► ರಾಜ್ಯ ಸಾರ್ವಜನಿಕ ಉದ್ಯಮಗಳಿಂದ ಸಣ್ಣ ಪ್ರಮಾಣದ ಮೊತ್ತವನ್ನು ಉನ್ನತ ಶಿಕ್ಷಣಕ್ಕೆ ಹಂಚಿಕೆ ಮಾಡುವಂತೆ ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಸಾರ್ವಜನಿಕ ಉದ್ಯಮಗಳಿಂದ ಇದೇ ರೀತಿಯ ಅನುದಾನ ಹಂಚಿಕೆ ಮಾಡಬೇಕೆಂದು ಕೇಂದ್ರ ಹಣಕಾಸು ಇಲಾಖೆಗೆ ಹಕ್ಕೊತ್ತಾಯ ಮಾಡಬೇಕು.

► ರಾಜ್ಯ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಪ್ರಸಾರಾಂಗದ ಪುಸ್ತಕ ಪ್ರಕಾಶನದ ಮೂಲಕವೂ ಹಣ ಸಂಗ್ರಹಿಸಿ ಉನ್ನತ ಶಿಕ್ಷಣದ ವೆಚ್ಚಕ್ಕೆ ಹಂಚಿಕೆ ಮಾಡಬೇಕು.

► ಕೇರಳ ಸರಕಾರವು 2021ರಲ್ಲಿ ಪ್ರಾರಂಭಿಸಿದ ಸ್ವ-ಹಣಕಾಸು ಕಾಲೇಜು ವ್ಯವಸ್ಥೆಯನ್ನು ಅಧ್ಯಯನ ಮಾಡಬೇಕು. ಅದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿದ್ದರೆ ಇಲ್ಲಿಯೂ ಅಳವಡಿಸಿಕೊಳ್ಳುವ ಸಾಧ್ಯತೆಗಳ ಕುರಿತು ನಿರ್ಧರಿಸಬೇಕು      

ಉಪಸಂಹಾರ
ಸ್ವಾಯತ್ತತೆ ಎಂದರೆ ಖಾಸಗೀಕರಣವಲ್ಲ ಎಂದು ಪ್ರಭುತ್ವವು ತುರ್ತಾಗಿ ಮನಗಾಣಬೇಕು. ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣವು ಸಾರ್ವಜನಿಕ ವ್ಯವಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಆದರೆ ಅವುಗಳ ನಿಯಂತ್ರಣ ಮತ್ತು ಆಡಳಿತ ವಿಧಾನವು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ. ಇತ್ತೀಚಿನವರೆಗೆ ಈ ಸಾರ್ವಜನಿಕ ಶಿಕ್ಷಣಕ್ಕೆ ಶೇ. 90 ಪ್ರಮಾಣದಲ್ಲಿ ಸರಕಾರದಿಂದ ಹಣಕಾಸು ಅನುದಾನ ದೊರಕುತ್ತಿತ್ತು. ಈಗಲೂ, ಉನ್ನತ ಶಿಕ್ಷಣಕ್ಕೆ ಸಾರ್ವಜನಿಕ ಶಿಕ್ಷಣದ ಅಡಿಯಲ್ಲಿ ಸಂಪೂರ್ಣ ಬೆಂಬಲ ನೀಡಬೇಕು. 

ಡಾ. ಪಿ.ಬಿ. ಗಜೇಂದ್ರಗಡ್ಕರ್ ಅಧ್ಯಕ್ಷರಾಗಿದ್ದ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ನಿಯಂತ್ರಣ (ಯುಜಿಸಿ 1971) ಕುರಿತು ರಚನೆಯಾದ ಸಮಿತಿಯು ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಮೇಲಿನ ವೆಚ್ಚವನ್ನು ಕೇವಲ ಸಾಮಾಜಿಕ ಸೇವೆ ಮಾತ್ರವಲ್ಲ, ಭವಿಷ್ಯದ ಮೇಲಿನ ಹೂಡಿಕೆ ಎಂದು ಪರಿಗಣಿಸಬೇಕು, ಯುಜಿಸಿ ಅನುದಾನದ ನಿರ್ವಹಣೆ ಸಂಬಂಧ ರಾಜ್ಯ ಸರಕಾರಗಳಿಗೆ ಸಲಹೆ, ಸೂಚನೆ ನೀಡುತ್ತಿರಬೇಕು, ವಿಶ್ವವಿದ್ಯಾನಿಲಯಗಳ ಘನತೆ ಮತ್ತು ಗೌರವ ಕಾಪಾಡಲು ಕಾಲಕಾಲಕ್ಕೆ ಸಂಬಂಧಿಸಿದ ವಿವಿಗಳಿಗೆ ಸಲಹೆ, ಸೂಚನೆ ಕೊಡುತ್ತಿರಬೇಕು ಮತ್ತು ಅದರ ಸ್ವಾಯತ್ತತೆಯನ್ನು ಕಾಪಾಡಲು ಶ್ರಮಿಸಬೇಕು. ಮೂರು ಪ್ರಧಾನ ಪ್ರಾಧಿಕಾರಗಳಾದ ನ್ಯಾಯಾಂಗ/ ಸಂಸತ್ತು, ಕಾರ್ಯಾಂಗ /ಸಿಂಡಿಕೇಟ್, ಅಕಾಡಮಿಕ್ ಪರಿಷತ್ಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗಬೇಕು, ಇದರ ಜೊತೆಗೆ ವಿದ್ಯಾರ್ಥಿ ಪರಿಷತ್, ಬೋಧನಾ ವೃಂದ /ಶಾಲೆಗಳನ್ನು ಸೇರಿಸಬೇಕು ಎಂದು ಶಿಫಾರಸು ಮಾಡಿತ್ತು. ಆಗ ಇನ್ನೂ ಖಾಸಗಿ ವಿಶ್ವವಿದ್ಯಾನಿಲಯಗಳು �

Similar News