ಮಂಗಳೂರು: ಡಾ.‌ಸುಮತಿ ಎಸ್ ಹೆಗ್ಡೆ ನೇತೃತ್ವದಲ್ಲಿ ಮಂಗಳಮುಖಿ ಸದಸ್ಯೆಯರು ಜನತಾದಳ ಪಕ್ಷಕ್ಕೆ ಸೇರ್ಪಡೆ

Update: 2023-04-01 08:04 GMT

ಮಂಗಳೂರು,ಎ.1: ಸುಮಾ ಸಧನ ಮಲ್ಲಿಕಟ್ಟೆಯ ಸಭಾಂಗಣದಲ್ಲಿ ಮಂಗಳೂರಿನಾದ್ಯಂತ ಇರುವ ನೂರಾರು ಮಂಗಳಮುಖಿಯರು ಜೆಡಿಎಸ್ ನಾಯಕಿ ಡಾ.‌ಸುಮತಿ ಎಸ್ ಹೆಗ್ಡೆಯವರ ಸಮ್ಮುಖದಲ್ಲಿ ನಿಷಾ ಅವರ ನಾಯಕತ್ವದಲ್ಲಿ  ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.  

ಕಾರ್ಯಕ್ರಮದಲ್ಲಿ  ಸದಸ್ಯೆಯರು ತಮ್ಮ ಅನುಭವವನ್ನು ಹಂಚುತ್ತಾ ಡಾ. ಸುಮತಿ ಎಸ್ ಹೆಗ್ಡೆಯವರ ಆತ್ಮೀಯತೆ , ಸ್ನೇಹ, ಹಾಗೂ ಸೇವೆಯ ಬಗ್ಗೆ ಪ್ರಸ್ತಾಪಿಸಿ ಇಂತಹ ವೇದಿಕೆ ನೀಡಿದ ಬಗ್ಗೆಯೂ ಮುಕ್ತ ಕಂಠದಿಂದ ಶ್ಲಾಘಿಸಿದರು. ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ ಮಂಗಳಮುಖಿ ಸದಸ್ಯೆಯರು , ಡಾ.‌ಸುಮತಿ‌ ಎಸ್ ಹೆಗ್ಡೆ ಗೆದ್ದು ಬಂದಲ್ಲಿ ತಮಗೆ ಶಾಶ್ವತ ನಿವೇಶನ ನೀಡುವ ಬಗ್ಗೆ ಅವಹಾಲು ಸಲ್ಲಿಸಿರುವ ವಿಚಾರಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಪಕ್ಷದ ಪರವಾಗಿ ಕೆಲಸ ಮಾಡುವುದಾಗಿಯೂ ವಿವರಿಸಿದರು.

ಕಳೆದ ಬಾರಿ ಬಿಜೆಪಿಗೆ ಮತನೀಡಿ , ಗೆದ್ದ ನಂತರ ಕಡೆಗಣಿಸಿದ ಶಾಸಕರ ಬಗ್ಗೆ ಆಕ್ರೋಶಗೊಂಡು, ಬಹಳ ಭಾವುಕರಾಗಿ ನುಡಿದರು.‌ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡು ಬಂದ ಕಾರ್ಯಕರ್ತೆಯರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಡಾ.‌ಸುಮತಿ ಎಸ್ ಹೆಗ್ಡೆ ಪಕ್ಷದ ಧ್ವಜ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. 

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ನಾಯಕಿ ಭಾರತೀ ಪುಷ್ಪರಾಜನ್, ಕವಿತಾ, ಆಶಾ ಸುಜ್ನೇಷ್, ಶಾರದಾ ಶೆಟ್ಟೆ, ಸುನೀತಾ, ಜೆಡಿಎಸ್ ಮಂಗಳೂರು ದಕ್ಷಿಣ ಪದಾಧಿಕಾರಿಗಳಾದ ಅಲ್ತಾಫ್ ತುಂಬೆ, ಸಲೀಂ ಜಾವೇದ್, ದಿನೇಶ್ ಪಯಿಸ್, ಜಯರಾಂ, ಮನೋಜ್ ಕುಮಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರಿಯಾ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿ ವಿನ್ಸೆಂಟ್ ಪೆರೇರಾ ವಂದಿಸಿದರು.

Similar News