×
Ad

ವಿವಿ ಕಾಲೇಜಿನಲ್ಲಿ ‘ಹವಾಮಾನ ಬದಲಾವಣೆ ವಿದ್ಯಾರ್ಥಿ ದೃಷ್ಟಿಕೋನ’ ಕಾರ್ಯಕ್ರಮ

Update: 2023-04-02 22:17 IST

ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಕರ್ನಾಟಕ ಸರಕಾರದ ಪರಿಸರ ಶಿಕ್ಷಣ ಕೇಂದ್ರ (ಸಿಇಇ) ಮತ್ತು ಯುನಿಸೆಫ್ ಬೆಂಬಲಿತ ‘‘ಹವಾಮಾನ ಬದಲಾವಣೆಯ ಕುರಿತು ವಿದ್ಯಾರ್ಥಿ ದೃಷ್ಟಿಕೋನ’’ ಕಾರ್ಯಕ್ರಮವನ್ನು ಶನಿವಾರ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾಗಿತ್ತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ಡಾ.ಅನಸೂಯಾ ರೈ, ವಿದ್ಯಾರ್ಥಿಗಳು ಪರಿಸರ ಶಿಕ್ಷಣ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿ, ಸಿಇಇ ತರಬೇತಿ ಪಡೆದ ಪರಿಸರ ಶಿಕ್ಷಣ ಮತ್ತು ಹವಾಮಾನ ಬದಲಾವಣೆ ಕುರಿತ ಮಾಸ್ಟರ್ ಟ್ರೈನರ್ ಡಾ. ಸಿದ್ದರಾಜು ಎಂ ಎನ್, ಹವಾಮಾನ ಬದಲಾವಣೆ ಮತ್ತು ಭೂಮಿಯ ಮೇಲೆ ಅದರ ಪ್ರಭಾವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲು ವಿವಿಧ ಚಟುವಟಿಕೆಗಳನ್ನು ನಡೆಸಿದರು.

ನೇಚರ್ ಕ್ಲಬ್ ಸಂಯೋಜಕ ಡಾ.ಸಂಜಯ್ ಅಣ್ಣಾರಾವ್ ಸ್ವಾಗತಿಸಿದರು. ಕು.ಸಿಂಚನಾ ಸಮಾರಂಭವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೇಚರ್ ಕ್ಲಬ್‌ನ  ಸುಮಾರು 100 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ಗುಂಪುಗಳಿಗೆ ಹವಾಮಾನ ಬದಲಾವಣೆಯ ಮೂಲಭೂತ ಅಂಶಗಳು, ಹವಾಮಾನ ಬದಲಾವಣೆಯ ಪರಿಣಾಮ, ಇಂಗಾಲದ ಹೆಜ್ಜೆಗುರುತು ಮತ್ತು ಹವಾಮಾನ ಬದಲಾವಣೆಯ ಪರಿಹಾರಗಳ ಕುರಿತು ತರಬೇತಿ ನೀಡಲಾಯಿತು.

Similar News