ಹಳೆಯಂಗಡಿ ಪ್ರಿಯದರ್ಶಿನಿಗೆ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಅಧ್ಯಯನ ತಂಡ ಭೇಟಿ

Update: 2023-04-03 17:26 GMT

ಹಳೆಯಂಗಡಿ: ಕರ್ನಾಟಕದ ದಕ್ಷಿಣ ವಿಭಾಗದ ವಿದ್ಯಾರ್ಥಿಗಳನ್ನೊಳಗೊಂಡ ಮೂಡಬಿದ್ರೆಯ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ – ಆಪರೇಟಿವ್ ಮ್ಯಾನೇಜ್‌ಮೆಂಟ್ ಅಧ್ಯಯನ ತಂಡ ಸೋಮವಾರ ಹಳೆಯಂಗಡಿ ಭೇಟಿ ನೀಡಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು.

ಇನ್‌ಸ್ಟಿಟ್ಯೂಟ್‌ನ ಸುಮಾರು 35 ವಿದ್ಯಾರ್ಥಿಗಳು ಈ ಅಧ್ಯಯನ ತಂಡದಲ್ಲಿದ್ದು ಪ್ರಿಯದರ್ಶಿನಿ ಕೋ -ಆಪರೇಟಿವ್ ಸೊಸೈಟಿ ಪ್ರಾರಂಭವಾದ ದಿನದಿಂದ ಇಂದಿನವರೆಗಿನ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಸಂಘದ ಅಧ್ಯಕ್ಷರಾದ ಎಚ್. ವಸಂತ್ ಬೆರ್ನಾರ್ಡ್ ಅವರು ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಹಕಾರ ಸಂಸ್ಥೆಗಳು ಉತ್ತಮ ಸ್ಥಾನ ಪಡೆದಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಸಂಘವನ್ನು ಅಭಿವೃದ್ಧಿಪಡಿಸುವುದೇ ತಮ್ಮ ಧ್ಯೇಯವಾಗಿದೆ ಎಂದು ನುಡಿದರು.

ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ – ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರಾಂಶುಪಾಲರಾದ ಬಿಂದು ಬಿ. ನಾಯರ್ ಅವರು ಸಂಸ್ಥೆಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಿಯದರ್ಶಿನಿ ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಅವರು ಸಂಘದ ವಿವರವಾದ ಮಾಹಿತಿ ನೀಡಿದರು. ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ – ಆಪರೇಟಿವ್ ಮ್ಯಾನೇಜ್‌ಮೆಂಟ್‌ನ ಉಪನ್ಯಾಸಕಿ ವನಜಾಕ್ಷಿ ಅವರು ವಂದಿಸಿದರು.
 

Similar News