ಚುನಾವಣಾ ಪ್ರಣಾಳಿಕೆಯಲ್ಲಿ ‘ಮಕ್ಕಳ ಬೇಡಿಕೆ’ ಸೇರಿಸಿಕೊಳ್ಳಲು ಮನವಿ
ಮಂಗಳೂರು: ಜಾತಿ-ಧರ್ಮ-ದ್ವೇಷ ಸಾಕು, ಶಿಕ್ಷಣದ ಮೂಲಭೂತ ಹಕ್ಕು-ಬೇಕು ಎಂಬ ಘೋಷಣೆಯಡಿ ರಾಜ್ಯ ಮಟ್ಟದ ಅಭಿಯಾನದ ಭಾಗವಾಗಿ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆ, ಶಿಕ್ಷಣ ಸಂಪನ್ಮೂಲಗಳ ಒಕ್ಕೂಟ ಮತ್ತು ಸಿಎಸಿಎಲ್‌ಕೆ ದ.ಕ.ಜಿಲ್ಲೆ ಇದರ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಕಚೇರಿಗೆ ತೆರಳಿ ತಮ್ಮ ಹಕ್ಕೊತ್ತಾಯಗಳ ಪ್ರತಿಗಳನ್ನು ನೀಡಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮಕ್ಕಳ ಪರವಾದ ಬೇಡಿಕೆಗಳನ್ನು ಸೇರಿಸಿಕೊಳ್ಳಲು ಮನವಿ ಮಾಡಲಾಯಿತು.
ಸಿಎಸಿಎಲ್‌ಕೆ ದ.ಕ. ಜಿಲ್ಲಾ ಸಂಚಾಲಕ ಮತ್ತು ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ, ಸಿಎಸಿಎಲ್‌ಕೆ ದ.ಕ. ಜಿಲ್ಲಾ ಸಂಯೋಜಕ ಸಿದ್ದಾಂತ್, ಶಿಕ್ಷಣ ಸಂಪನ್ಮೂಲ ಕೇಂದ್ರದ ಎಂ.ಪ್ರೇಮಿ ಡಿಸೋಜ, ಹಾರಿಸ್ ಮಂಚಿ, ದುರ್ಗಾ ಪ್ರಸಾದ್, ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಮಂಗಳೂರು ಉತ್ತರ ವಲಯದ ದಯಾನಂದ ಶೆಟ್ಟಿ ಹಾಗೂ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಅಧ್ಯಕ್ಷ ಮೊಯಿದಿನ್ ಕುಟ್ಟಿ ಮತ್ತಿತರರು ಈ ನಿಯೋಗದಲ್ಲಿದ್ದರು.