ಮಂಗಳೂರು: ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಘೋಷಣೆ
Update: 2023-04-06 18:19 IST
ಮಂಗಳೂರು : ಆಮ್ ಆದ್ಮಿ ಪಾರ್ಟಿ ರಾಜ್ಯ ಸಮಿತಿಯು ಬಿಡುಗಡೆ ಮಾಡಿದ ವಿಧಾನಸಭಾ ಚುನಾವಣೆಯ ಎರಡನೇ ಪಟ್ಟಿಯಲ್ಲಿ ಮಂಗಳೂರು ನಗರ ಉತ್ತರ (ಸುರತ್ಕಲ್) ಕ್ಷೇತ್ರಕ್ಕೆ ಸಂದೀಪ್ ಶೆಟ್ಟಿ ಹಾಗೂ ಪುತ್ತೂರು ಕ್ಷೇತ್ರಕ್ಕೆ ಡಾ.ಬಿ.ಕೆ ವಿಶುಕುಮಾರ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ದ.ಕ ಜಿಲ್ಲಾಧ್ಯಕ್ಷ ಅಶೋಕ ಎಡಮಲೆ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷವು ರಾಜ್ಯದ ಜನತೆಗೆ ಹತ್ತು ಗ್ಯಾರಂಟಿ ಭರವಸೆಗಳನ್ನು ನೀಡಿದೆ. ಈಗಾಗಲೇ ಸಕ್ರೀಯವಾಗಿ ಸಮಾಜದಲ್ಲಿ ತೊಡಗಿಸಿಕೊಂಡು ಗ್ಯಾರಂಟಿ ಭರವಸೆಗಳ ಪೂರಕ ಮಾಹಿತಿಯನ್ನು ಕಾರ್ಯಕರ್ತರು ನೀಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಲಿನ್ಸ್, ಜಿಲ್ಲಾ ಕಾರ್ಯದರ್ಶಿ ಫ್ಲೋರಿನಾ ಗೋವೆಸ್, ಅಭ್ಯರ್ಥಿಗಳಾದ ಡಾ.ಬಿ.ಕೆ ವಿಶುಕುಮಾರ್ ಹಾಗೂ ಸಂದೀಪ ಪುರಂದರ ಶೆಟ್ಟಿ ಉಪಸ್ಥಿತರಿದ್ದರು.