BJP ಪೋಸ್ಟರ್ ಗಳನ್ನು ಬಿಜೆಪಿಯ ಜಾಹೀರಾತಿನಿಂದಲೇ ಮುಚ್ಚಿರುವ ಫೋಟೊ ವೈರಲ್: ಚು.ಆಯೋಗದ ನಡೆಗೆ ಕಾಂಗ್ರೆಸ್ ಅಸಮಾಧಾನ
ಬೆಂಗಳೂರು: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ರಾಜ್ಯಾದ್ಯಂತ ಬ್ಯಾನರ್, ಫ್ಲೆಕ್ಸ್ ಹಾಗೂ ಪೋಸ್ಟರ್‌ಗಳನ್ನು ಚುನಾವಣಾ ಆಯೋಗವು ತೆರವುಗೊಳಿಸಿದೆ. ಈ ನಡುವೆ ಬೆಂಗಳೂರು ನಗರದಲ್ಲಿ ಬಿಜೆಪಿ ಪಕ್ಷಕ್ಕೆ ಸಂಬಂಧಿಸಿದ ಪೋಸ್ಟರ್ ಗಳನ್ನು ಬಿಜೆಪಿಯ ಜಾಹೀರಾತಿನಿಂದಲೇ ಮುಚ್ಚಿರುವುದು ಬೆಳಕಿಗೆ ಬಂದಿದೆ.
ಈ ಕುರಿತ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸರಕಾರದ ಪತ್ರಿಕಾ ಜಾಹೀರಾತನ್ನು ಬಿಜೆಪಿ ಪೋಸ್ಟರ್ ಗಳ ಮೇಲೆ ಅಂಟಿಸಲಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಬಿಜೆಪಿಯ ಜಾಹೀರಾತು ಮುಚ್ಚಿದ್ದು ಬಿಜೆಪಿಯ ಜಾಹೀರಾತಿನಿಂದಲೇ! ಇದು ಬೆಂಗಳೂರಿನ ಜ್ಯುಡಿಶೀಯಲ್ ಲೇಔಟ್ ನಲ್ಲಿ ಕಂಡುಬಂದಿದೆ. ಚುನಾವಣಾಧಿಕಾರಿಗಳೇ, ನಿಮ್ಮ ನೀತಿ ಸಂಹಿತೆ ಜಾರಿಯಲ್ಲಿ ಬಿಜೆಪಿಗೆ ಅನುಕೂಲವಾಗುವಂತಹ ಹಲವು ಲೋಪಗಳು ನಡೆಯುತ್ತಿವೆ. ನಿಷ್ಪಕ್ಷಪಾತ, ಲೋಪರಹಿತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು'' ಎಂದು ಒತ್ತಾಯಿಸಿದೆ.
ಬಿಜೆಪಿಯ ಜಾಹೀರಾತು ಮುಚ್ಚಿದ್ದು ಬಿಜೆಪಿಯ ಜಾಹೀರಾತಿನಿಂದಲೇ!
— Karnataka Congress (@INCKarnataka) April 7, 2023
ಇದು ಬೆಂಗಳೂರಿನ ಜ್ಯುಡಿಶೀಯಲ್ ಲೇಔಟ್ ನಲ್ಲಿ ಕಂಡುಬಂದಿದೆ.@ceo_karnataka ಅವರೇ, ನಿಮ್ಮ ನೀತಿ ಸಂಹಿತೆ ಜಾರಿಯಲ್ಲಿ ಬಿಜೆಪಿಗೆ ಅನುಕೂಲವಾಗುವಂತಹ ಹಲವು ಲೋಪಗಳು ನಡೆಯುತ್ತಿವೆ.
ನಿಷ್ಪಕ್ಷಪಾತ, ಲೋಪರಹಿತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. pic.twitter.com/j0W06vdWOS