×
Ad

ಮಂಗಳೂರು: ಸೌಹಾರ್ದ ಇಫ್ತಾರ್ ಕೂಟ

Update: 2023-04-07 17:46 IST

ಮಂಗಳೂರು: ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಮತ್ತು ಗ್ರೂಫ್ ಆಫ್ ತಾಜ್ ಇದರ ಜಂಟಿ ಆಶ್ರಯದಲ್ಲಿ ಸೌಹಾರ್ದ ಇಫ್ತಾರ್ ಕೂಟ ಹಾಗೂ ವಾಯ್ಸ್ ಆಫ್ ಟ್ರಸ್ಟಿನ ಲಾಂಛನ ಅನಾವರಣ ಕಾರ್ಯಕ್ರಮವು ಗುರುವಾರ ನಗರದ ಸಿಟಿ ಟವರ್‌ನ ಆವರಣದಲ್ಲಿ ನಡೆಯಿತು.

ಶೇಕ್ ಮುಹಮ್ಮದ್ ಇರ್ಫಾನಿ ಫೈಝಿ ಅಲ್‌ಅಝ್ಹರಿ ಉದ್ಘಾಟಿಸಿದರು. ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಬಂದರ್ ‘ದಿ ವಾಯ್ಸ್ ಆಫ್ ಟ್ರಸ್ಟ್’ನ ಲಾಂಛನವನ್ನು ಮಾಜಿ ಮೇಯರ್ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಅವರಿಗೆ ನೀಡುವ ಮೂಲಕ ಲೋಕಾರ್ಪಣೆಗೊಳಿಸಿದರು.

ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ನ ಅಧ್ಯಕ್ಷ ಓಸ್ವಾಲ್ ಫುರ್ಟಾಡೊ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜೆಡಿಎಸ್ ನಾಯಕಿ ಸುಮತಿ ಎಸ್. ಹೆಗ್ಡೆ, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ಶಂಸುದ್ದೀನ್ ಬಂದರ್, ಸಾಹಿತಿ ಹುಸೈನ್ ಕಾಟಿಪಳ್ಳ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಮಾಜಿ ಕಾರ್ಪೊರೇಟರ್ ಪ್ರಕಾಶ್ ಸಾಲ್ಯಾನ್, ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್, ಎಂ.ಕೆ. ಝಹೀರ್ ಅಬ್ಬಾಸ್, ಸಾದಿಕ್, ನಝೀರ್ ದೇರಳಕಟ್ಟೆ ಭಾಗವಹಿಸಿದ್ದರು.

Similar News