ಬಾಲಸಂರಕ್ಷಣಾ ಕೇಂದ್ರದ ಮಕ್ಕಳಿಗೆ ಅನ್ನದಾನ
ಮಂಗಳೂರು: ಮಕ್ಕಳ ಸೇವೆ ದೇವರ ಸೇವೆಗೆ ಸಮವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಗಣ್ತಡಿ ಫ್ಯಾಮಿಲಿ ಸೇವಾ ಟ್ರಸ್ಟ್ ಸದಸ್ಯ ಮಹಾಬಲ ಹೆಗ್ಡೆ ಮಾಗಣ್ತಡಿ ಹೇಳಿದರು.
ಮಾಗಣ್ತಡಿ ಫ್ಯಾಮಿಲಿ ಸೇವಾ ಟ್ರಸ್ಟ್ ವತಿಯಿಂದ ಕುತ್ತಾರ್ ಪದವಿನಲ್ಲಿರುವ ಬಾಲಸಂರಕ್ಷಣಾ ಕೇಂದ್ರದ ಮಕ್ಕಳಿಗೆ ಶುಕ್ರವಾರ ನಡೆದ ಅನ್ನದಾನ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಟ್ರಸ್ಟ್ ವತಿಯಿಂದ ಮುಖ್ಯಸ್ಥ ಶ್ರೀಧರ್ ಶೆಟ್ಟಿಯ ಮಾರ್ಗದರ್ಶನದಲ್ಲಿ ಪ್ರತಿವರ್ಷ ಪುಸ್ತಕ, ಕಲಿಕಾ ವಸ್ತುಗಳು, ಬಡ ರೋಗಿಗಳ ಚಿಕಿತ್ಸೆ ಸಹಿತ ಇತರ ರೂಪದಲ್ಲಿ ಸಹಾಯ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆ ನೀಡಲಿದೆ ಎಂದರು.
ಈ ಸಂದರ್ಭ ಮಾಗಣ್ತಡಿ ಫ್ಯಾಮಿಲಿ ಸೇವಾ ಟ್ರಸ್ಟ್ ಅಧ್ಯಕ್ಷ ಜಯರಾಮ್ ಭಂಡಾರಿ, ಕಾರ್ಯದರ್ಶಿ ಜಗನ್ನಾಥ್ ಶೆಟ್ಟಿ ಮಾಗಣ್ತಡಿ, ಕೋಶಾಧಿಕಾರಿ ದೇವಿ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.