×
Ad

ಬೆಂಗಳೂರು: ಚಾಕೊಲೇಟ್ ತಂದಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಪತ್ನಿ

Update: 2023-04-07 18:58 IST

ಬೆಂಗಳೂರು, ಎ.7: ಪತಿ ಚಾಕೊಲೇಟ್ ತಂದಿಲ್ಲವೆಂದು ಕ್ಷುಲ್ಲಕ ಕಾರಣಕ್ಕೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಂದಿನಿ (24) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದುಬಂದಿದೆ.

ಆರು ವರ್ಷದ ಹಿಂದೆ ಗೌತಮ್ ಎಂಬಾತನನ್ನು ಮದುವೆಯಾಗಿದ್ದ ನಂದಿನಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಗೌತಮ್ ಸಲೂನ್‍ನಲ್ಲಿ ಕೆಲಸಮಾಡಿಕೊಂಡಿದ್ದು, ಎಂದಿನಂತೆನಿನ್ನೆಬೆಳಗ್ಗೆ ಕೆಲಸಕ್ಕೆಹೊರಟಿದ್ದ ಗೌತಮ್‍ಬಳಿ ಚಾಕೊಲೇಟ್ ತಂದು ಕೊಡುವಂತೆನಂದಿನಿ ಕೇಳಿದ್ದಳು. ಕೆಲಸದಲ್ಲಿ ನಿರತನಾಗಿದ್ದ ಗೌತಮ್ ಮಧ್ಯಾಹ್ನವಾದರೂ ಚಾಕೊಲೇಟ್ ತಂದು ಕೊಟ್ಟಿರಲಿಲ್ಲ. ಮನೆಗೆಬಂದುನೋಡಿದಾಗ ನಂದಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎನ್ನಲಾಗಿದೆ.

ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಗಿದೆಯಾದರೂ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಾಳೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ| ಪಟ್ರಮೆಯಲ್ಲಿ ಇಬ್ಬರು ಯುವತಿಯರ ಸಾವು: ವಿಷ ಸೇವಿಸಿ ಆತ್ಮಹತ್ಯೆ ಶಂಕೆ

Similar News