ಬೆಂಗಳೂರು | ಹಾಡಿನ ಧ್ವನಿ ಕಡಿಮೆಗೊಳಿಸಿ ಎಂದಿದ್ದಕ್ಕೆ ವ್ಯಕ್ತಿಯ ಕೊಲೆ ಪ್ರಕರಣ: ಮೂವರು ಟೆಕ್ಕಿಗಳ ಬಂಧನ
Update: 2023-04-07 21:03 IST
ಬೆಂಗಳೂರು, ಎ.7: ಹಾಡಿನ ಧ್ವನಿ ಏರಿಕೆ ವಿಚಾರವಾಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದ ಆರೋಪ ಪ್ರಕರಣ ಸಂಬಂಧ ಮೂರು ಟೆಕ್ಕಿಗಳನ್ನು ಇಲ್ಲಿನ ಎಚ್‍ಎಎಲ್ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಬಾಸುದೇವ ಸಮಂತ್ ರಾಯ್, ಅಭಿಷೇಕ್ ಸಿಂಗ್ ಹಾಗೂ ಅನಿರುದ್ಧ್ ಎಂಬಾತನನ್ನು ಹೊಸದಿಲ್ಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಎ.2ರಂದು ವಿಜ್ಞಾನನಗರದಲ್ಲಿ ಟೆಕ್ಕಿ ಗುಂಪೊಂದು ಹಾಡಿನ ಧ್ವನಿ ಕಡಿಮೆ ಮಾಡಿ ಎಂದು ಹೇಳಿದ್ದಕ್ಕೆ ಲೋಯಡ್ ನೇಮಯ್ಯ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಲೋಯಡ್ ನೇಮಯ್ಯ ಮೃತಪಟ್ಟಿದ್ದರು.
ಇದನ್ನೂ ಓದಿ; ಬೆಂಗಳೂರು: ಚಾಕೊಲೇಟ್ ತಂದಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಪತ್ನಿ