×
Ad

ಉಳ್ಳಾಲ: ಎಸ್ ವೈ ಎಸ್ ವತಿಯಿಂದ ವಸ್ತ್ರ ವಿತರಣೆ

Update: 2023-04-08 17:44 IST

ಉಳ್ಳಾಲ: ಎಸ್ ವೈ ಎಸ್ ತೊಕ್ಕೊಟ್ಟು ಯುನಿಟ್ ವತಿಯಿಂದ ಪೆರ್ನಾಲ್ ವಸ್ತ್ರ ವಿತರಣಾ ಕಾರ್ಯಕ್ರಮವು ಪಿಲಾರ್ ದಾರುಲ್ ಮುಸ್ತಫಾ ಕಚೇರಿಯಲ್ಲಿ  ಎಸ್ ವೈ ಎಸ್ ಉಪಾಧ್ಯಕ್ಷ ಇಲ್ಯಾಸ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆಯಿತು. ಮುಸ್ಲಿಂ ಜಮಾತ್ ಅಜಾದ್ ನಗರ ಅಧ್ಯಕ್ಷ ಬಶೀರ್ ಪಿಲಾರ್ ಅರ್ಹ ಕುಟುಂಬಕ್ಕೆ ವಸ್ತ್ರ ವಿತರಿಸಿದರು.

ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ದಹ್ ವಾ ಕಾರ್ಯದರ್ಶಿ ಹಾಫಿಲ್ ಆಸಿಕ್ ಉಸ್ತಾದ್ ಅಕ್ಕರಕರ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು. ಎಸ್ ಎಸ್ ಎಫ್ ತೊಕ್ಕೊಟ್ಟು ಸೆಕ್ಟರ್ ಮುಖಂಡ ಸಿರಾಜ್ ಉಸ್ತಾದ್ ಮಾತಾಡಿ ಸಮಾಜ ಸೇವೆ ಅಭಿನಂದನೆ ಎಂದರು. ತೊಕ್ಕೊಟ್ಟು ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ದಾರಂದ ಬಾಗಿಲು, ತೊಕ್ಕೊಟ್ಟು ಮುಸ್ಲಿಂ ಜಮಾ ಅತ್ ಫೈನಾನ್ಸ್ ಕಾರ್ಯದರ್ಶಿ ಅಮೀರ್ ಹಿದಾಯತ್ ನಗರ, ತೊಕ್ಕೊಟ್ಟು ಎಸ್ ವೈ ಎಸ್ ಫೈನಾನ್ಸ್ ಕಾರ್ಯದರ್ಶಿ ಸಮೀರ್ ಪಿಲಾರ್, ಉಳ್ಳಾಲ ದರ್ಗಾ ಕೇಂದ್ರ ಸಮಿತಿ ಸದಸ್ಯ ಮುಸ್ತಫಾ ದಾರಂದ ಬಾಗಿಲು ಮತ್ತಿತರರು ಉಪಸ್ಥಿತರಿದ್ದರು.

ಅಲ್ತಾಫ್ ಕುಂಪಲ ಸ್ವಾಗತಿಸಿ ವಂದಿಸಿದರು

Similar News