×
Ad

ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ

Update: 2023-04-08 20:50 IST

ಬ್ರಹ್ಮಾವರ, ಎ.8: ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದ ಬ್ರಹ್ಮಾವರ ಎ.ವಿ. ಬಾಳಿಗಾ ಕ್ಯಾಂಟಿನ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಮಂಗಳೂರು ಕಣ್ಣೂರು ಪಡೀಲ್ ನಿವಾಸಿ ಚಿತ್ತರಂಜನ್(50) ಎಂಬವರು ಎ.1ರಂದು ಹೊರಗೆ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಲೂರು: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಗೆಸ್ಟ್ ಹೌಸ್‌ನಲ್ಲಿ ಉಳಿದುಕೊಂಡಿದ್ದ ಚಿಕ್ಕಬಳ್ಳಾಪುರ ಗೌರಿಬಿದನೂರು ತಾಲೂಕಿನ ವೆಂಕಟರಾಮಪ್ಪ (55) ಎಂಬವರು ಎ.6ರಂದು ಬೆಳಗಿನ ಜಾವ ಬರ್ಹಿದೆಸೆಗೆ ಎಂದು ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News