×
Ad

ಕಾರುಗಳನ್ನು ಕದ್ದು ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ

Update: 2023-04-09 18:12 IST

ಬೆಂಗಳೂರು, ಎ.9: ಕಾರುಗಳನ್ನು ಕದ್ದು ಅವುಗಳ ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ಹಲವರನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಸೀಬ್, ಮಂಜುನಾಥ್, ಶಹಬಾಝ್, ರಿಯಾಝ್, ಇಮ್ರಾನ್ ಹಾಗೂ ನಯಾಝ್ ಬಂಧಿತರಾಗಿದ್ದು, ಇವರಿಂದ 3 ಕೋಟಿ ರೂ ಮೌಲ್ಯದ ಎಂಟು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚಿಗೆ ಜೆಡಿಎಸ್ ವಿಧಾನ ಪರಿಷತ್ತಿನ ಸದಸ್ಯ ಭೋಜೇಗೌಡ ಅವರ ಕಾರಿನ ಸಂಖ್ಯೆ ಬಳಸಿದ್ದು, ಆ ಕಾರನ್ನು ಕ್ವೀನ್ಸ್ ರಸ್ತೆಯ ಐ ಕಾರ್ಸ್ ಸ್ಟುಡಿಯೋದಲ್ಲಿ ಮಾರಾಟಕ್ಕಿಟ್ಟಿದ್ದರು. ಇದನ್ನು ಕಂಡ ಭೋಜೇಗೌಡರ ಆಪ್ತರೊಬ್ಬರು ನೀಡಿದ ಮಾಹಿತಿಯನ್ವಯ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

Similar News