×
Ad

ಮಂಗಳೂರು ಉತ್ತರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಡಾ. ವೈ. ಭರತ್ ಶೆಟ್ಟಿ ಮರು ಆಯ್ಕೆ

Update: 2023-04-11 22:49 IST

ಸುರತ್ಕಲ್: ಈ ಬಾರಿಯ ವಿಧಾನ ಸಭಾ ಚುನಾವಣೆಗೆ ಮಂಗಳೂರು ಉತ್ತರ ಕ್ಷೇತ್ರಕ್ಕೆ ಟಿಕೆಟ್ ಹಂಚಿಕೆಯ ಕುರಿತು ಇದ್ದ ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಜೆಪಿ ಹೈಕಮಾಂಡ್, ಇಲ್ಲಿನ ಶಾಸಕರಾಗಿದ್ದ ಡಾ. ವೈ. ಭರತ್ ಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿದೆ‌.

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ಡಾ. ವೈ. ಭರತ್ ಶೆಟ್ಟಿ ಅವರು ಯೆಯ್ಯಾಡಿ ಹರಿಪದವು ನಿವಾಸಿ.  ದಿವಂಗತ ಡಾ.ವೈ ಚಂದ್ರಶೇಖರ ಶೆಟ್ಟಿ ಮತ್ತು ದಿ. ಚಂದ್ರಲೇಖಾ ಶೆಟ್ಟಿಯ ಪುತ್ರ.

ಇವರು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಮಂಗಳೂರು ಇದರ ಆರ್ಥೊಡಾಂಟಿಕ್ಸ್ ವಿಭಾಗ‌ದ ಸಹಾಯಕ ಪ್ರೊಫೆಸರ್ ಅಗಿರುವ  ಡಾ. ಆಸಾವರಿ ಶೆಟ್ಟಿ, ಎಂಡಿಎಸ್ ಅವರನ್ನು ವಿವಾಹವಾಗಿದ್ದು, ಮಗ ಕನಿಷ್ಕ್ ಶೆಟ್ಟಿ ( 7)  ಮತ್ತು ಅವರ ಸಹೋದರಿ ಮೇನಾ ಸುಧಾಕರ ಶೆಟ್ಟಿ ಅವರೊಂದಿಗೆ ವಾಸವಾಗಿದ್ದಾರೆ.

1998ರಲ್ಲಿ ಎಬಿ ಶೆಟ್ಟಿ ಸ್ಮಾರಕ ಸಂಸ್ಥೆಯಿಂದ ಎಂಡಿಎಸ್ (Prosthodontics), 1993ರಲ್ಲಿ ಎಬಿ ಶೆಟ್ಟಿ ಸ್ಮಾರಕ ಸಂಸ್ಥೆಯಿಂದ ಬಿಡಿಎಸ್ ಪದವಿಯಲ್ಲಿ  ಉತ್ತೀರ್ಣರಾಗಿದ್ದಾರೆ‌.

ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಪ್ರಾಥಮಿಕ ಶಿಕ್ಷಣ ವರ್ಗ (ITC) ಹಾಗೂ ಸಂಘ ಶಿಕ್ಷಣ ವರ್ಗ (1ನೇ ವರ್ಷದ OTCಯನ್ನು ಪೂರ್ಣಗೊಳಿಸಿದ್ದಾರೆ.

ಮಂಗಳೂರು ನಗರ ಉತ್ತರ ಕ್ಷೇತ್ರದ ವಿಧಾನಸಭಾ ಸದಸ್ಯರಾಗಿರುವ ಇವರು, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಸಾಮಾಜಿಕ ಜಾಲತಾಣ ಮತ್ತು ಹೈಟೆಕ್ ಪ್ರಚಾರದ ಉಸ್ತುವಾರಿಯಾಗಿದ್ದರು.

ಮಂಗಳೂರಿನಲ್ಲಿ ನರೇಂದ್ರ ಮೋದಿ ಅವರ "ಭಾರತ ಗೆಲ್ಲಿಸಿ" ರ‍್ಯಾಲಿಗೆ ಪ್ರಚಾರ ಉಸ್ತುವಾರಿಯಾಗಿ, ಏಕತಾ ಪ್ರತಿಮೆ ಸರ್ದಾರ್ ವಲ್ಲಭಭಾಯಿ ಪಟೇಲ್ ಲೋಹ ಸಂಗ್ರಹಣಾ ಸಮಿತಿ ಮತ್ತು ಏಕತೆಯ ಓಟ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ಮಂಗಳೂರು ಜಿಲ್ಲಾ ಕಾರ್ಯದರ್ಶಿಯಾಗಿ ಮತ್ತು ಮಂಗಳೂರು ನಗರ ಉತ್ತರ ಮಂಡಲದ  ಅಧ್ಯಕ್ಷರಾಗಿ ದುಡಿದಿದ್ದಾರೆ.

ಹಿಂದಿನ ವೃತ್ತಿಪರ ಹುದ್ದೆಗಳು: 
1. ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಚುನಾಯಿತ ಉಪಾಧ್ಯಕ್ಷ, 
2. ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಚುನಾಯಿತ ಕಾರ್ಯಕಾರಿ ಸಮಿತಿಯ ಸದಸ್ಯ 
2010 ರಲ್ಲಿ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಚುನಾಯಿತ ಸದಸ್ಯ.
ಜನವರಿ 4, 2010 ರಿಂದ 2015 ರವರೆಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಕರ್ನಾಟಕ  ಇದರ ಚುನಾಯಿತ ಸೆನೆಟ್ ಸದಸ್ಯರಾಗಿ ಆಯ್ಕೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ.
ಭಾರತೀಯ ದಂತ ಸಂಘದ 2008ರಿಂದ ಎರಡು ವರ್ಷಕ್ಕೆ  ಅಧ್ಯಕ್ಷ.
ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇದರ ಅಕಾಡೆಮಿಕ್ ಕೌನ್ಸಿಲ್ ಸದಸ್ಯ.
ಜೆಎಸ್ಎಸ್  ವಿಶ್ವವಿದ್ಯಾಲಯ, ಮೈಸೂರು ಇದರ ಸಿಬ್ಬಂದಿ ಆಯ್ಕೆ ಸಮಿತಿ ಸದಸ್ಯ.
2014ರಿಂದ ಮಂಗಳೂರಿನ ಎಜೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‌ನ ಪ್ರಾಧ್ಯಾಪಕ ಮತ್ತು ಪ್ರಾಂಶುಪಾಲರಾಗಿ ಆಯ್ಕೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನ ಆಡಳಿತ ಮಂಡಳಿ ಸದಸ್ಯ.

ಕಳೆದ 8 ವರ್ಷಗಳಿಂದ ಭಾರತೀಯ ದಂತ ಸಂಘದ ಸೆಂಟ್ರಲ್ ಕೌನ್ಸಿಲ್ ಸದಸ್ಯ.
ಕಳೆದ 10 ವರ್ಷಗಳಿಂದ ಐಡಿಎ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ
ಯೆನೆಪೊಯ ವಿಶ್ವವಿದ್ಯಾಲಯ ಮಂಗಳೂರು ಇದರ ಅಕಾಡೆಮಿಕ್ ಕೌನ್ಸಿಲ್ ಸದಸ್ಯ 

ಸಾಮಾಜಿಕ ಜವಾಬ್ದಾರಿಗಳು ಮತ್ತು ಚಟುವಟಿಕೆಗಳು:
1. ಮಂಗಳೂರು ನಾಗರಿಕ ಮಂಡಳಿಯ ಸ್ಥಾಪಕ ಸದಸ್ಯರು ಮತ್ತು ಸಲಹಾ ಮಂಡಳಿಯ ಸದಸ್ಯರು.
2. ಜಿಲ್ಲೆಯ ಗ್ರಾಮೀಣ ಜನತೆಗೆ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಿದ್ದು ಇಲ್ಲಿಯವರೆಗೆ ಒಂದು ಲಕ್ಷ ಜನರು ಪ್ರಯೋಜನ ಪಡೆದಿದ್ದಾರೆ.

Similar News