ಬೆಂಗಳೂರಿನಲ್ಲಿ ಮತದಾರರ ಚೀಟಿ ಸಂಗ್ರಹ ಆರೋಪ: JDS ಅಭ್ಯರ್ಥಿ ವಿರುದ್ಧ ಮುಖ್ಯ ಚುನಾವಣಾಧಿಕಾರಿಗೆ ದೂರು
Update: 2023-04-11 23:45 IST
ಬೆಂಗಳೂರು, ಎ.11: ಅಕ್ರಮವಾಗಿ ಮತದಾರರ ಚೀಟಿ ಸಂಗ್ರಹ ಮಾಡುತ್ತಿರುವ ಆರೋಪದಡಿಯಲ್ಲಿ ಗಾಂಧಿನಗರ ಜೆಡಿಎಸ್ ಅಭ್ಯರ್ಥಿ ವಿ ನಾರಾಯಣ ಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ.
ಕೆಪಿಸಿಸಿ ಕಾನೂನು ವಿಭಾಗದಿಂದ ದೂರು ನೀಡಲಾಗಿದ್ದು, ವಿ.ನಾರಾಯಣ ಸ್ವಾಮಿ ಅವರು ತಮ್ಮ ಕಾರ್ಯಕರ್ತರ ಮೂಲಕ ಮನೆ ಮನೆಗೆ ತೆರಳಿ ಕೆಲವು ಮತದಾರರ ವೋಟರ್ ಐಡಿಯ ಝೆರಾಕ್ಸ್ ಪ್ರತಿಗಳನ್ನು ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕೂಡಲೇ ಫ್ಲೈಯಿಂಗ್ ಸ್ಕಾಡ್ ತಂಡವನ್ನು ಕಳಿಸಿ ಈ ಅಕ್ರಮವನ್ನು ತಡೆಗಟ್ಟುವಂತೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಸಂಬಂಧಿಸಿದಂತೆ ಕೆಲವೊಂದು ವಿಡಿಯೋ ದಾಖಲೆಗಳನ್ನು ಕುಡಾ ದೂರಿನಲ್ಲಿ ಉಲ್ಲೇಖಿಸಲಾಗಿದೆ.