×
Ad

ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಬಿಜೆಪಿಯ ಆರ್.ಶಂಕರ್ ರಾಜೀನಾಮೆ

Update: 2023-04-12 16:23 IST

ಬೆಂಗಳೂರು: ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಬಿಜೆಪಿಯ ಆರ್.ಶಂಕರ್ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. 

ವಿಧಾನಸೌಧಧಲ್ಲಿ ಬುಧವಾರ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಸಲ್ಲಿಸಿದರು. 

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್.ಶಂಕರ್, ಹಾಲಿ ಶಾಸಕ ಅರುಣ್ ಕುಮಾರ್‌ಗೆ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಾರೆ.  

ಇತ್ತೀಚೆಗೆ ರಾಣೇಬೆನ್ನೂರಿನ ತಮ್ಮ ಮನೆಯ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ನಡೆಸಿದ್ದ ವೇಳೆ ಬಿಜೆಪಿ ವಿರುದ್ಧ ನೇರ ಆರೋಪ ಮಾಡಿದ್ದ ಶಂಕರ್, ''ರಾಜಕೀಯವಾಗಿ ನನ್ನನ್ನು ಮುಗಿಸಿದ್ದಾರೆ. ಬಿಜೆಪಿಯವರು ಹಂತ ಹಂತವಾಗಿ ನನ್ನನ್ನು ಚುಚ್ಚಿ ಚುಚ್ಚಿ ಮಾನಸಿಕವಾಗಿ ಕೊಲೆ ಮಾಡಿದ್ದಾರೆ. ಇವರ ಜೊತೆ ಹೋಗಿದ್ದಕ್ಕೆ ಅನರ್ಹ ಎಂಬ ಪಟ್ಟ ಕಟ್ಟಿದರು'' ಎಂದು ಬೇಸರ ವ್ಯಕ್ತಪಡಿಸಿದ್ದರು. 
.

Similar News