ಎ.18ರಂದು ಸಿಪಿಎಂ, ಸಿಪಿಐ ಜಂಟಿ ರಾಜಕೀಯ ಸಮಾವೇಶ
Update: 2023-04-14 19:37 IST
ಮಂಗಳೂರು, ಎ.18ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಬಲ್ಮಠ ರೋಡ್‌ನಲ್ಲಿರುವ ಡಾನ್‌ಬಾಸ್ಕೋ ಹಾಲ್‌ನಲ್ಲಿ ಸಿಪಿಐ(ಎಂ), ಸಿಪಿಐ ಜಂಟಿ ಜಿಲ್ಲಾ ಸಮಾವೇಶವನ್ನು ನಡೆಸಲಾಗುತ್ತಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭೆಗೆ ಮೇ ತಿಂಗಳ 10 ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರವನ್ನು ‘ಅಪರೇಶನ್ ಕಮಲ’ ಎಂಬ ಅನೈತಿಕ ದಾರಿಯಲ್ಲಿ ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲೇ ಚುನಾವಣೆ ಎದುರಾಗಿದೆ. ಬಿಜೆಪಿ ಅಧಿಕಾರದ ಪ್ರತೀ ಹಂತದಲ್ಲೂ ಕಡಿವಾಣವಿಲ್ಲದ ಭ್ರಷ್ಟಾಚಾರ ನಡೆಸಿದೆ ಎಂದು ಅವರು ಹೇಳಿದ್ದಾರೆ.