×
Ad

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪ: ಮೂವರ ಬಂಧನ

Update: 2023-04-14 20:01 IST

ಬೆಂಗಳೂರು, ಎ. 14: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.   

ದೇಶದಲ್ಲಿ ಎಲ್ಲಿಯೇ ಮ್ಯಾಚ್ ನಡೆದರೂ ಅಲ್ಲಿಗೆ ಧಾವಿಸಿ, ಮೈದಾನದಲ್ಲಿ ಕುಳಿತುಕೊಂಡೆ ಬೆಟ್ಟಿಂಗ್ ದಂಧೆ ನಡೆಸಿ, ಪಂದ್ಯ ಶುರುವಾಗಿ ಮುಗಿಯುವ ವೇಳೆಗೆ ಕೋಟಿ ಸಂಪಾದಿಸುತಿದ್ದ ಹರಿಯಾಣ ಮೂಲದ ಮೂವರು ಆರೋಪಿಗಳು ಕಬ್ಬನ್ ಪಾರ್ಕ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. 

ದೇಶದ ವಿವಿಧ ಕಡೆ ತಮ್ಮ ಸಹಚರರನ್ನು ಹೊಂದಿರುವ ಗ್ಯಾಂಗ್, ಐಪಿಎಲ್ ಮ್ಯಾಚ್ ಸಂದರ್ಭದಲ್ಲಿ ಸಹಚರರು ಮೈದಾನಕ್ಕೆ ಹೋಗಿ, ಪ್ರತಿ ಬಾಲ್ ಕುರಿತು ಮೆಸೇಜ್ ಮೂಲಕ ತಮ್ಮ ಗ್ಯಾಂಗ್‍ನ ಇತರರಿಗೆ ಮಾಹಿತಿ ನೀಡುತ್ತಾರೆ. 

ಬಳಿಕ ಅವರ ಮಾಹಿತಿ ಆಧರಿಸಿ ಟಿವಿ ನೋಡಿಕೊಂಡು ಬೆಟ್ಟಿಂಗ್ ಆಡುತ್ತಿರುವವರನ್ನು ಸಂಪರ್ಕಿಸಿ ಬೆಟ್ಟಿಂಗ್ ಮಾಡುತ್ತಾರೆ. ಅದರಲ್ಲಿ ಎನಿದೆ? ಕ್ರೀಡಾಂಗಣದ ಲೈವ್ ಮ್ಯಾಚ್‍ಗೂ ಟಿವಿಯ ಲೈವ್ ಮ್ಯಾಚ್‍ಗೂ 10 ಸೆಕೆಂಡ್ ಅಂತರವಿದೆ. ಇದನ್ನೇ ಬಳಸಿಕೊಂಡಿರುವ ಈ ಗ್ಯಾಂಗ್ ಹಲವು ಕಡೆ ವಂಚನೆ ಮಾಡುತ್ತಿದ್ದರು. 

ಇನ್ನು ಈ ಪ್ರಕರಣದ ಕುರಿತು ಮತ್ತಷ್ಟು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಬೆಟ್ಟಿಂಗ್ ಕಳ್ಳಾಟಕ್ಕೆ ಹೊಸದಿಲ್ಲಿ ಲಿಂಕ್ ಇದ್ದು, ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Similar News