×
Ad

ಮೇ 2ರಿಂದ ಸುರತ್ಕಲ್‌ ಬಾಳ ತೊತ್ತಾಡಿ ಶ್ರೀನಾಹಬ್ರಹ್ಮಸ್ಥಾನದಲ್ಲಿ ಪುನರ್‌ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ

ಆಮಂತ್ರಣ ಪತ್ರಿಕೆ ಬಿಡುಗಡೆ

Update: 2023-04-14 23:13 IST

ಸುರತ್ಕಲ್: ಇಲ್ಲಿನ ಬಾಳ ತೊತ್ತಾಡಿ ಶ್ರೀ ನಾಹಬ್ರಹ್ಮಸ್ಥಾನದಲ್ಲಿ ಮೇ 2ರಿಂದ 5ರ ವರೆಗೆ ನಡೆಯಲಿರುವ ನಾಗಬ್ರಹ್ಮ ದೇವರ ಮತ್ತು ಪರಿವಾರ ದೈವಗಳ ಪುನರ್‌ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಗುರುವಾರ ಸಂಜೆ ಪುಣ್ಯ ಕ್ಷೇತ್ರದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ಸುರತ್ಕಲ್ನ ಅಧ್ಯಕ್ಷ ಸುಧಾಕರ ಪೂಂಜಾ ಮಾತನಾಡಿದರು. ಕಾರ್ಯಕ್ರಮದಲ್ಲಿ  ಜೆ.ಡಿ. ವೀರಪ್ಪ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅನಿಲ್‌ ಶೆಟ್ಟಿ ಕೆಳಗಿನ ಮನೆ, ಪ್ರಧಾನ ಕಾರ್ಯದರ್ಶಿ ಭಾಸ್ಕರ ರಾವ್‌ ಬಾಳ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಿತ್ತರಂಜನ್‌ ಭಂಡಾರಿ ಐಕಳ ಬಾವ, ಪ್ರಧಾನ ಕಾರ್ದರ್ಶಿ ಶಿವಪ್ರಸಾದ್‌ ಬಾಳ, ಆಡಳಿತ ಸಮಿತಿ ಅಧ್ಯಕ್ಷ ಕೆ. ದೇವದಾಸ್‌ ಶೆಟ್ಟಿ ಸಾನದ ಹೊಸಮನೆ, ಪ್ರಧಾನ ಕಾರ್ಯದರ್ಶಿ ವೇಣು ವಿನೋದ್‌ ಶೆಟ್ಟಿ ಬಾಳದ ಗುತ್ತು, ಅರ್ಚಕರಾದ ಗುರುರಾಜ್‌ ಭಟ್‌, ಗುತ್ತಿನಾರ್‌ ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚಿತ್ತರಂಜನ್‌ ಭಂಡಾರಿ ಐಕಳಬಾವ ಪ್ರಾಸ್ತಾವಿಕ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ರಾವ್‌ ಸ್ವಾಗತಿಸಿದರು.

Similar News