×
Ad

ಸಿಎಂ ಬೊಮ್ಮಾಯಿ ಸಹಿತ 200 ಮಂದಿ ನಾಮಪತ್ರ ಸಲ್ಲಿಕೆ

Update: 2023-04-15 20:04 IST

ಬೆಂಗಳೂರು, ಎ. 15: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಒಟ್ಟು 200 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಶನಿವಾರ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವ್ ಕ್ಷೇತ್ರದಿಂದ, ಸಚಿವ ಗೋವಿಂದ ಕಾರಜೋಳ-ಮುಧೋಳ, ಬಸನಗೌಡ ಪಾಟೀಲ್ ಯತ್ನಾಳ್-ವಿಜಯಪುರ ನಗರ, ಮಾಜಿ ಸಚಿವರಾದ ಕರುಣಾಕರ ರೆಡಿ-ಹರಪ್ಪನಹಳ್ಳಿ, ಎಚ್.ಹಾಲಪ್ಪ-ಸಾಗರ, ಡಿ.ಸಿ.ತಮ್ಮಣ್ಣ-ಮದ್ದೂರು ಹಾಗೂ ಶಾಸಕ ಪಿ.ರಾಜೀವ್-ಕುಡುಚಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಬಿಜೆಪಿ-26, ಆಮ್ ಆದ್ಮಿ ಪಕ್ಷ-22, ಜೆಡಿಎಸ್-20, ಕಾಂಗ್ರೆಸ್ ಪಕ್ಷ-5, ಸಿಪಿಎಂ-2, 41 ಮಂದಿ ಪಕ್ಷೇತರರು ಸೇರಿದಂತೆ ಒಟ್ಟು 200 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಆ ಪೈಕಿ 184 ಮಂದಿ ಪುರುಷರು ಹಾಗೂ 16 ಮಂದಿ ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Similar News