ಉಳ್ಳಾಲ ತಾಲೂಕು ಮಟ್ಟದ ಸಿಪಿಎಂ ಪಕ್ಷದ ಸಭೆ
Update: 2023-04-17 18:50 IST
ಮಂಗಳೂರು: ರಾಜ್ಯದಲ್ಲಿ ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಉಳ್ಳಾಲ ತಾಲೂಕು ಮಟ್ಟದ ಸಿಪಿಎಂ ಪಕ್ಷದ ಸರ್ವ ಸದಸ್ಯರ ಸಭೆಯು ಕಾ.ಸುಂದರ ಕುಂಪಲರ ಅಧ್ಯಕ್ಷತೆಯಲ್ಲಿ ನಡೆಯಿತು.
ಪಕ್ಷದ ಉಳ್ಳಾಲ ತಾಲೂಕು ಕಾರ್ಯದರ್ಶಿ ಯು.ಜಯಂತ ನಾಯ್ಕ್ ಮಾತನಾಡಿ ರೈತ ಕಾರ್ಮಿಕ ವಿರೋಧಿ ಬಿಜೆಪಿಯನ್ನು ಸೋಲಿಸಲು ಕಾರ್ಮಿಕರಿಗೆ ತಿಳುವಳಿಕೆ ನೀಡಬೇಕು. ಕ್ಷೇತ್ರದಲ್ಲಿ ಜಾತ್ಯತೀತ ಪಕ್ಷವನ್ನು ಗೆಲ್ಲಿಸಬೇಕು ಎಂದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ತೊಕ್ಕೊಟ್ಟು, ಹಿರಿಯ ಕಾರ್ಮಿಕ ಮುಂದಾಳು ಯು.ಬಿ.ಲೋಕಯ್ಯ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಕೃಷ್ಣಪ್ಪಸಾಲಿಯಾನ್, ಕಾರ್ಯದರ್ಶಿ ಮಂಡಳಿ ಸದಸ್ಯೆ ಪದ್ಮಾವತಿ ಶೆಟ್ಟಿ, ರೋಹಿದಾಸ್ ಭಟ್ನಗರ ವಂದಿಸಿದರು.