ಎಸ್‌ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ನಾಮಪತ್ರ ಸಲ್ಲಿಕೆ
ಉಳ್ಳಾಲ, ಎ.17: ಮಂಗಳೂರು ವಿಧಾನಸಭಾ ಕ್ಷೇತ್ರ ಎಸ್‌ಡಿಪಿಐ ಅಭ್ಯರ್ಥಿ ಮುಹಮ್ಮದ್ ರಿಯಾಝ್ ಸೋಮವಾರ ಉಳ್ಳಾಲ ನಗರಸಭೆಯ ಕಾರ್ಯಾಲಯದಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ರಾಜು ಕೆ. ಅವರಿಗೆ ನಾಮಪತ್ರ ಸಲ್ಲಿಸಿದರು.
ಅದಕ್ಕೂ ಮುನ್ನ ತೊಕ್ಕೊಟ್ಟುವಿನಲ್ಲಿ ನಡೆದ ಸಾರ್ವಜನಿಕ ಸಭೆ ನಡೆಯಿತು. ಎಸ್‌ಡಿಪಿಐ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಸಭೆಯನ್ನು ಉದ್ಘಾಟಿಸಿದರು. ರಿಯಾಝ್ ಫರಂಗಿಪೇಟೆ ಸಾರ್ವಜನಿ ಕರನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಮಾಸ್ತಿಕಟ್ಟೆಯಿಂದ ಉಳ್ಳಾಲ ನಗರಸಭಾ ಕಾರ್ಯಾಲಯಕ್ಕೆ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭ ಎಸ್‌ಡಿಪಿಐ ಮುಖಂಡರಾದ ಅಶ್ರಫ್ ಮಾಚಾರ್, ಅನ್ವರ್ ಸಾದತ್ ಬಜತ್ತೂರು, ಅಡ್ವೊಕೇಟ್ ಮಜೀದ್, ಅಶ್ರಫ್ ಮಂಚಿ, ಶಾಹಿದಾ, ಮಿಶ್ರಿಯಾ ಕಣ್ಣೂರು, ಸುಹೈಲ್ ಖಾನ್, ರವಿ ಕುಟಿನ್ಹ, ಕಮರುನ್ನೀಸಾ, ಇಕ್ಬಾಲ್ ಸಜಿಪ, ಸುನಿತಾ ಸಲ್ದಾನ, ರವಿ ಸಲ್ದಾನ, ಅಬ್ಬಾಸ್ ಎಆರ್., ಎಸ್‌ಎಂ ಬಶೀರ್, ಇಮ್ತಿಯಾಝ್ ಕಿನ್ಯ, ಮೊಯ್ದಿನ್ ಹಾಜಿ, ನವಾಝ್ ಸಜಿಪ, ಎನ್.ಎ. ಅಬ್ದುಸ್ಸಲಾಂ, ನವಾಝ್ ಉಳ್ಳಾಲ, ಸಲಾಂ ವಿದ್ಯಾನಗರ, ಅನ್ಸಾರ್ ಇನೋಳಿ, ಹಮೀದ್, ಅಬ್ದುರ‌್ರಹ್ಮಾನ್ ಮದನಿನಗರ, ಉಬೈದ್ ಅಮ್ಮೆಂಬಳ, ಸಂತೋಷ್ ಮೊಂತೆರೊ, ನವೀನ್ ಸಲ್ದಾನ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಇರ್ಶಾದ್ ಅಜ್ಜಿನಡ್ಕ ಸ್ವಾಗತಿಸಿದರು.
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಿವಾಸಿಯಾಗಿರುವ ಮುಹಮ್ಮದ್ ರಿಯಾಝ್‌ರ ಬಳಿ 1,90,000 ರೂ. ಮತ್ತವರ ಪತ್ನಿ ಶಮೀಮಾ ಬಳಿ 1,50,000 ರೂ. ನಗದು ಇದೆ. ರಿಯಾಝ್‌ರ ಆ್ಯಕ್ಸಿಸ್ ಬ್ಯಾಂಕ್ ಖಾತೆಯಲ್ಲಿ 19,845 ರೂ. ಮತ್ತು ಯೂನಿಯನ್ ಬ್ಯಾಂಕ್ ಖಾತೆಯಲ್ಲಿ 10,893 ರೂ. ಇದೆ. ಪತ್ನಿ ಶಮೀಮಾ ಬಳಿ 11,08,000 ರೂ. ಮೌಲ್ಯದ 200 ಗ್ರಾಂ ಚಿನ್ನ ಹಾಗೂ ಪುತ್ರಿ ಫಾತಿಮತ್ ರಿಫಾ ಮತ್ತು ಫಾತಿಮತ್ ರಿಝ್ಮಾ ಬಳಿ ತಲಾ 4,43,200 ರೂ. ಮೌಲ್ಯದ ತಲಾ 80 ಗ್ರಾಂ ಚಿನ್ನವಿದೆ. ಮುಹಮ್ಮದ್ ರಿಯಾಝ್ ಅವರು ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ 1,78,269 ರೂ. ಸಾಲ ಹೊಂದಿದ್ದಾರೆ.
ರಿಯಾಝ್ ವಿರುದ್ಧ ವಿವಿಧ ಗುಂಪುಗಳ ಮಧ್ಯೆ ದ್ವೇಷ ಹರಡುವುದು, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಹಿತ ಬೆಳ್ತಂಗಡಿ, ಪಾಂಡೇಶ್ವರ, ಕೊಣಾಜೆ, ಬಂದರು, ಕದ್ರಿ ಹಾಗೂ ಹೊಸದಿಲ್ಲಿಯ ಎನ್‌ಐಎಯಲ್ಲಿ ಪ್ರಕರಣ ದಾಖಲಾಗಿವೆ.