ಬಂಟ್ವಾಳ: ಎಸ್ಡಿಪಿಐ ಅಭ್ಯರ್ಥಿಯಾಗಿ ಇಲ್ಯಾಸ್ ತುಂಬೆ ನಾಮಪತ್ರ ಸಲ್ಲಿಕೆ
ಬಂಟ್ವಾಳ : ಬಿಜೆಪಿ ನೇರವಾಗಿ ಧರ್ಮ ರಾಜಕಾರಣ ಮಾಡಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದರೆ, ಕಾಂಗ್ರೆಸ್ ಪಕ್ಷ ಅವರಿಗೆ ಪರೋಕ್ಷವಾಗಿ ಬೆಂಬಲಿಸುತ್ತಿದ್ದು, ಅವರ ಬಗ್ಗೆ ಮೃದು ಧೋರಣೆ ಹೊಂದಿದೆ. ಇವೆಲ್ಲದಕ್ಕೂ ಪರ್ಯಾಯ ವ್ಯವಸ್ಥೆ ಆಗಬೇಕಾದರೆ ಬಂಟ್ವಾಳದಲ್ಲಿ ಇಲ್ಯಾಸ್ ತುಂಬೆ ಅವರು ಆರಿಸಿ ಬರಬೇಕಾದ ಅನಿವಾರ್ಯತೆ ಇದೆ ಎಂದು ಎಸ್ಡಿಪಿಐ ಪಕ್ಷದ ರಾಷ್ಟ್ರೀಯ ಚುನಾವಣಾ ವೀಕ್ಷಕ ಇ.ಎಂ.ಫೈಝಲ್ ಹೇಳಿದರು.
ಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಎಸ್.ಡಿ.ಪಿ.ಐ. ಅಭ್ಯರ್ಥಿಯಾಗಿ ಇಲ್ಯಾಸ್ ಮಹಮ್ಮದ್ ತುಂಬೆ ನಾಮಪತ್ರ ಸಲ್ಲಿಕೆಯ ಸಂದರ್ಭ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಧರ್ಮ ಧರ್ಮದ ನಡುವೆ ರಾಜಕೀಯ ಹೆಸರಿನಲ್ಲಿ ನಡೆಯುತ್ತಿರುವ ಗಲಭೆ, ದೌರ್ಜನ್ಯ ಗಳು ಕೊನೆಗಾಣಬೇಕಾ ದರೆ ಎಸ್.ಡಿ.ಪಿ.ಐ. ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ವಿಧಾನ ಸಭೆಯನ್ನು ಪ್ರವೇಶಿಸಬೇಕಾಗಿದೆ ಎಂದರು.
ಬಂಟ್ವಾಳ ಕ್ಷೇತ್ರದ ಎಸ್.ಡಿ.ಪಿ.ಐ.ಪಕ್ಷದ ಅಭ್ಯರ್ಥಿ ಇಲ್ಯಾಸ್ ತುಂಬೆ ಮಾತನಾಡಿ, ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರುಗಳು ಕೇವಲ ಕೋಟಿ, ಕೋಟಿ ಅನುದಾನದ ಬ್ಯಾನರ್ ರಾಜಕೀಯ ಮಾಡಿದ್ದು ಬಿಟ್ಟರೆ ಯಾವುದೇ ರೀತಿಯ ಜನಪರ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಜನತೆಗೆ ಯಾವುದೇ ರೀತಿಯ ಗ್ಯಾರಂಟಿ ಕಾರ್ಡ್ ನ ಅವಶ್ಯಕತೆ ಇಲ್ಲ, ಪದವೀಧರರಿಗೆ ನಿರುದ್ಯೋಗಗಳಿಗೆ ಉದ್ಯೋಗ, ಹಸಿವು ಮುಕ್ತ, ಭಯಮುಕ್ತ , ಶಾಂತಿ ಸೌಹಾರ್ದತೆ ಸಹಬಾಳ್ವೆಯ ಜೀವನ ಬೇಕಾಗಿದೆ ಎಂದರು.
ಮಂಗಳೂರು ಕ್ಷೇತ್ರದ ಎಸ್. ಡಿ.ಪಿ.ಐ.ಪಕ್ಷದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಮಾತನಾಡಿದರು.
ಪಕ್ಷ ಪ್ರಮುಖರಾದ ಅಡ್ವಕೇಟ್ ಮಜೀದ್ ಖಾನ್, ಮೂನಿಸ್ ಆಲಿ ಬಂಟ್ವಾಳ, ಎಸ್.ಎಚ್. ಸಾಹುಲ್, ಅಕ್ಬರ್ ಅಲಿ ಪೊನ್ನೋಡಿ, ಶಾಕೀರ್ ಅಳಕೆಮಜಲು , ಖಲಂದರ್ ಪರ್ತಿಪ್ಪಾಡಿ, ಮುಸ್ತಾಕ್ ತಲಪಾಡಿ, ಐಎಂಆರ್ ಇಕ್ಬಾಲ್ ಗೂಡಿನ ಬಳಿ, ಯೂಸುಫ್ ಆಲಡ್ಕ, ಝೀನತ್ ಗೂಡಿನಬಳಿ, ಪಿ.ಜೆ.ಇದ್ರೀಸ್ ಜೈನರಪೇಟೆ, ಅನ್ವರ್ ಸಾದಾತ್ ಬಜತ್ತೂರು, ಅಶ್ರಫ್ ತಲಪಾಡಿ, ಶಾಹಿದಾ, ನಸ್ರಿಯಾ, ಅಶ್ರಫ್ ಅಡ್ಡೂರು, ಶಾಹಿದಾ ತಸ್ನೀಮ್, ಅನ್ವರ್ ಬಡಕಬೈಲ್, ಝಹನಾ, ಹನೀಫ್ ಪುಂಜಾಲಕಟ್ಟೆ, ಶಂಶಾದ್ ಗೂಡಿನಬಳಿ, ಶಬೀನಾ ನಂದಾವರ, ಮತ್ತಿತರರು ಉಪಸ್ಥಿತರಿದ್ದರು.
ಕೈಕಂಬದ ಪಕ್ಷದ ಕಚೇರಿಯ ಬಳಿಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಳಿಕ ಸಾರ್ವಜನಿಕ ಸಭೆ ನಡೆದು ಅಭ್ಯರ್ಥಿ ಜೊತೆಗೆ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಬಿಸಿರೋಡು ವರೆಗೆ ಬಂದರು. ಅ ಬಳಿಕ ಅಭ್ಯರ್ಥಿ ಚುನಾವಣಾ ಅಧಿಕಾರಿಗೆ ನಾಮಪತ್ತ ಸಲ್ಲಿಸಿದರು.