×
Ad

ಮಂಗಳೂರು | ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ಈದ್ ನಮಾಝ್ ಪೂರ್ವಭಾವಿ ಸಭೆ

Update: 2023-04-18 12:34 IST

ಮಂಗಳೂರು, ಎ.18: ನಗರದ ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ಈದುಲ್ ಫಿತ್ರ್ ಪ್ರಯುಕ್ತ ಸಾಮೂಹಿಕ ಈದ್ ನಮಾಝ್ ನಿರ್ವಹಿಸುವ ಕುರಿತು ಚರ್ಚಿಸಲು ಪುರ್ವಬಾವಿ ಸಭೆಯು ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಎ.15ರಂದು ನಡೆಯಿತು.

ಬಾವಟಗುಡ್ಡೆ ಈದ್ಗಾ ಮಸೀದಿಯಲ್ಲಿ ಬೆಳಗ್ಗೆ 8 ಗಂಟೆಗೆ ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ನೇತೃತ್ವದಲ್ಲಿ ಸಾಮೂಹಿಕ ಈದ್ ನಮಾಝ್ ನಿರ್ವಹಿಸಲಾಗುತ್ತದೆ.

 ಸಭೆಯಲ್ಲಿ ಮಂಗಳೂರು ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಅಧ್ಯಕ್ಷ ಹಾಜಿ ಯೆನೆಪೊಯ ಅಬ್ದುಲ್ಲ ಕುಂಞಿ, ಉಪಾಧ್ಯಕ್ಷ ಕೆ.ಅಶ್ರಫ್, ಕೋಶಾಧಿಕಾರಿ ಹಾಜಿ ಸೈಯದ್ ಅಹ್ಮದ್ ಬಾಷಾ ತಂಙಳ್, ಆಡಳಿತ ಸಮಿತಿಯ ಸದಸ್ಯರುಗಳಾದ ಹಾಜಿ ಎಸ್.ಎಂ. ರಶೀದ್, ಹಾಜಿ ಅಬ್ದುಲ್ ಸಮದ್, ಮುಹಮ್ಮದ್ ಅಶ್ರಫ್ ಹಳೆಮನೆ, ಅದ್ದು ಹಾಜಿ, ಹಾಜಿ ಐ.ಮೊಯ್ದಿನಬ್ಬ, ಈದ್ಗಾ ಮಸೀದಿಯ ಖತೀಬ್ ಮುಸ್ತಫ ಅಝ್ಹರಿ, ಸಿ.ಮಹ್ಮೂದ್ ಹಾಜಿ ಕಾಪ್ರಿಗುಡ್ಡೆ ಮಂಗಳೂರು, ಅಹ್ಮದ್ ಬಾವ (Ex COUNCILER), ಮಂಗಳೂರು ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಹಾಜಿ ರಿಯಾಝುದ್ದೀನ್, ಹಾಜಿ ಫಕೀರಬ್ಬ ಫ್ಲವರ್ ಮರ್ಚೆಂಟ್ ಮಂಗಳೂರು, ಕಂಡತ್‌ಪಳ್ಳಿ ಜುಮಾ ಮಸೀದಿಯ ಅಧ್ಯಕ್ಷ ಶಮೀಮ್ ಅಹ್ಮದ್, ಕಾರ್ಯದರ್ಶಿ ಉಮರ್ ಫಾರೂಕ್, ಸಿ.ಎಂ.ಮುಸ್ತಫ ಬಂದರ್, ಹಮೀದ್ ಕಚ್‌ಮೀನ್ ಬಂದರ್, ಇಮ್ರಾನ್ ಎ.ಆರ್., ಡಿ.ಎಂ.ಅಸ್ಲಂ ಬಂದರ್, ಅಹ್ಮದ್ ಬಾವ ಬಿ.ಸಿ.ರೋಡ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.

Similar News