×
Ad

ಮಂಗಳೂರು: ಕಾರು ಚಾಲನ ಮೃತದೇಹ ಪತ್ತೆ; ಕೊಲೆ ಶಂಕೆ

Update: 2023-04-18 19:30 IST

ಮಂಗಳೂರು, ಎ.18: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ನಿವಾಸಿ, ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಜನಾರ್ದನ ಪೂಜಾರಿ  (45) ಎಂಬವರ ಮೃತದೇಹ ನಗರದ ನೆಹರೂ ಮೈದಾನದ ಬಳಿ ಮಂಗಳವಾರ ಸಂಜೆ ಸುಮಾರು 5ಕ್ಕೆ ಪತ್ತೆಯಾಗಿದ್ದು, ಕೊಲೆಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನಾರ್ದನ ಪೂಜಾರಿಯ ಜತೆ ಕೆಲವರು ಹೊಡೆದಾಟ ನಡೆಸಿದ್ದು, ಬಳಿಕ ಅವರ ಮೃತದೇಹ ನೆಹರೂ ಮೈದಾನದಲ್ಲಿ ಕಂಡು ಬಂದಿದೆ ಎನ್ನಲಾಗಿದೆ. ಕೃತ್ಯಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.

ಜನಾರ್ದನ ಪೂಜಾರಿ ಬಿಜೆಪಿಯ ಅಮ್ಮುಂಜೆ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದು, ಪ್ರಸ್ತುತ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ.

ಜನಾರ್ದನ ಪೂಜಾರಿಯ ಮೃತದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.

Similar News