×
Ad

ಚುನಾವಣೆ ಹಿನ್ನೆಲೆ; ಇಂಜಿಯರ್ ಪರೀಕ್ಷೆಗಳನ್ನು ಮುಂದೂಡಿದ ವಿಟಿಯು

Update: 2023-04-18 21:29 IST

ಬೆಂಗಳೂರು, ಎ.18: ಮೊದಲ ವರ್ಷದ ಇಂಜಿಯರಿಂಗ್ ಪರೀಕ್ಷೆಗೆ ಕೇವಲ ಎರಡು ದಿನಗಳು ಉಳಿದಿದ್ದು, ಇದುವೆರೆಗೂ ಪ್ರವೇಶಪತ್ರ ಪ್ರಕಟಗೊಂಡಿಲ್ಲ. ಹಾಗಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವು ಪರೀಕ್ಷೆಗಳನ್ನು ಮುಂದೂಡಿದೆ.

ಈ ವಿಚಾರವಾಗಿ ಮಂಗಳವಾರ ಸಂಜೆ ವಿಟಿಯು ಮಾಹಿತಿ ನೀಡಿದ್ದು, ಮೊದಲ ವರ್ಷದ ಮೊದಲ ಸೆಮಿಸ್ಟರ್ ಪರೀಕ್ಷೆಗಳು ಎ.20ರಿಂದ ಆರಂಭ ಮಾಡಲು ವೇಳಾಪಟ್ಟಿ ಪ್ರಕಟವಾಗಿತ್ತು. ವಿಟಿಯು ವ್ಯಾಪ್ತಿಯ ಕಾಲೇಜುಗಳ ಉಪನ್ಯಾಸಕರನ್ನು ಚುನಾವಣೆಯ ಕೆಲಸಕ್ಕೆ ಬಳಸಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮುಂದೂಡಿಕೆಯಾಗಿರುವ ಪರೀಕ್ಷೆಗಳನ್ನು ಎ.27ರಿಂದ ನಡೆಸಲು ವಿಟಿಯು ತೀರ್ಮಾನಿಸಿದೆ.

Similar News