×
Ad

ಬೆಂಗಳೂರು: ಆಸ್ಪತ್ರೆಯಿಂದ ಮಗು ಕದ್ದ ಮಹಿಳೆಯ ಸೆರೆ

Update: 2023-04-19 22:15 IST

ಬೆಂಗಳೂರು, ಎ.19: ಇತ್ತೀಚಿಗೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಗು ಕಳವು ಆಗಿದ್ದ ಪ್ರಕರಣ ಸಂಬಂಧ ವಿವಿಪುರಂ ಠಾಣಾ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.

ರಾಮನಗರ ಮೂಲದ ದಿವ್ಯಾ ರಶ್ಮೀ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚಿಗೆ ವಾಣಿ ವಿಲಾಸ್ ಆಸ್ಪತ್ರೆಯಿಂದ ಒಂದು ವಾರದ ಮಗು ಅಪಹರಣ ಆದ ಬಳಿಕ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಬಳಿಕ ವಾಣಿ ವಿಲಾಸ ಆಸ್ಪತ್ರೆ, ಮೈಸೂರು ರಸ್ತೆಯಲ್ಲಿ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಲಾಗಿತ್ತು. ದಾರಿಯುದ್ದಕ್ಕೂ 600 ಸಿಸಿಟಿವಿಗಳನ್ನ ಪೊಲೀಸರು ಪರಿಶೀಲನೆ ಮಾಡಿದ ಬಳಿಕ ಆರೋಪಿ ಚಹರೆ ಪತ್ತೆಯಾಗಿತ್ತು.

ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Similar News