ಶನಿವಾರ ಈದುಲ್ ಫಿತ್ರ್: ದ.ಕ. ಜಿಲ್ಲಾ ಖಾಝಿ ಘೋಷಣೆ
Update: 2023-04-20 19:59 IST
ಮಂಗಳೂರು: ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಎಲ್ಲೂ ಆಗಿಲ್ಲ. ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಆಗಲಿರುವುದರಿಂದ ಪಶ್ಚಿಮ ಕರಾವಳಿ ತೀರದಲ್ಲಿ ಶನಿವಾರ (ಎ.22) ಈದುಲ್ ಫಿತ್ರ್ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.