ವಿಧಾನಸಭಾ ಚುನಾವಣೆ: ಆಮ್ ಆದ್ಮಿ ಪಕ್ಷದ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ

Update: 2023-04-21 12:22 GMT

ಬೆಂಗಳೂರು, ಎ.21: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಲಿರುವ ತಾರಾ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ರಾಜ್ಯಸಭಾ ಸದಸ್ಯರಾದ ಸಂಜಯ್ ಸಿಂಗ್, ರಾಘವ್ ಚಡ್ಡಾ, ಮುಖಂಡರಾದ ಹರ್ಭಜನ್ ಸಿಂಗ್, ಅತಿಶಿ ಮರ್ಲೆನಾ, ಸೌರಬ್ ಭಾರದ್ವಾಜ್, ದಿಲೀಪ್ ಪಾಂಡೆ, ಉಪೇಂದ್ರ ಗಾಂವ್ಕರ್, ಇಮ್ರಾನ್ ಹುಸೇನ್, ಪ್ರಹ್ಲಾದ್ ಸಹಾನಿ, ಶೆಹನಾಜ್ ಹಿಂದೂಸ್ಥಾನಿ, ಎಸ್.ಎ.ಎನ್. ಅಸಿಗರನ್ ಹಾಗೂ ಸೆಸಿಲ್ಲೆ ರೊಡ್ರಿಗಸ್.

ರಾಜ್ಯ ನಾಯಕರಾದ ಪೃಥ್ವಿ ರೆಡ್ಡಿ, ಡಾ.ಮುಖ್ಯಮಂತ್ರಿ ಚಂದ್ರು, ಡಾ.ಸತೀಶ್ ಕುಮಾರ್, ಅಬ್ದುಲ್ ರಝಾಕ್, ಗುರುಮೂರ್ತಿ, ಅಕ್ರಮ್ ಸೇಠ್ ಸೇರಿದಂತೆ ಒಟ್ಟು 40 ಮಂದಿ ತಾರಾ ಪ್ರಚಾರಕರು ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಾರ್ವತ್ರಿಕ ಚುನಾವಣಾ ಪ್ರಚಾರವನ್ನ ನಡೆಸಲಿದ್ದಾರೆ.

Similar News