×
Ad

ಕನ್ನಡದ ಕಿರುತೆರೆ ನಟ ಸಂಪತ್ ಜಯರಾಮ್ ಆತ್ಮಹತ್ಯೆ

Update: 2023-04-23 11:35 IST

ಬೆಂಗಳೂರು: ಕನ್ನಡದ ಖ್ಯಾತ ಕಿರುತೆರೆ ನಟ ಸಂಪತ್ ಜಯರಾಮ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. 

ಅಗ್ನಿ ಸಾಕ್ಷಿ ಧಾರಾವಾಹಿ ಸೇರಿ ಕೆಲವು ಸಿನೆಮಾಗಳಲ್ಲಿ ಸಂಪತ್ ಜಯರಾಮ್ ಅವರು ನಟಿಸಿದ್ದರು. ಆದರೆ, ಇತ್ತೀಚೆಗೆ ಕೆಲ ದಿನಗಳಿಂದ ಸೂಕ್ತ ಅವಕಾಶ ಸಿಗಲಿಲ್ಲ ಎಂಬ ಚಿಂತೆ ಸಂಪತ್ ಅವರಲ್ಲಿ ಎದುರಾಗಿತ್ತು ಎಂದು ವರದಿಗಳು ತಿಳಿಸಿವೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸಂಪತ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Similar News