ʼಎಡಬ್ಲ್ಯೂಎʼ ಮೂರನೇ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

Update: 2023-04-24 11:30 GMT

ದುಬೈ: ಎಡಬ್ಲ್ಯೂಎ (ANGARAGUNDI WELFARE ASSOCIATION UAE) ಸಂಸ್ಥೆಯು ಮೂರು ವರ್ಷಗಳಿಂದ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇದೀಗ ಮುಂದಿನ ವರ್ಷಕ್ಕೆ ಪಾದಾರ್ಪಣೆಗೈಯ್ಯುತ್ತಿದೆ.

ಈ ಸಂಸ್ಥೆಯ ಮೂರನೇ ವಾರ್ಷಿಕ ಮಹಾಸಭೆಯು ಮುತೀನ ಪಾರ್ಕ್ (Dubai, UAE) ಹೋಟೆಲಿನಲ್ಲಿ ನಡೆಯಿತು. ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ  ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಮುಂದಿನ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಹೊಸ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಉಸ್ಮಾನ್, ಉಪಾಧ್ಯಕ್ಷರಾಗಿ ಇಸ್ಮಾಯಿಲ್, ಗೌರವಾಧ್ಯಕ್ಷರಾಗಿ ರಹೀಂ, ಪ್ರಧಾನ ಕಾರ್ಯದರ್ಶಿಯಾಗಿ ಯೂನಸ್, ಕಾರ್ಯದರ್ಶಿಯಾಗಿ ಇಮ್ರಾನ್, ಸಂಘಟನಾ ಕಾರ್ಯದರ್ಶಿಯಾಗಿ ಬಶೀರ್, ಸಾಮಾಜಿಕ ಜಾಲತಾಣ ಉಸ್ತುವಾರಿಯಾಗಿ ಫೈಝಲ್ ಆಯ್ಕೆಯಾದರು.

Similar News