ಹಜ್ಜ್ ಯಾತ್ರಾರ್ಥಿಗಳ ಸೇವೆಗೆ ವಿಶೇಷ ಕೌಂಟರ್: ಎಸ್‌ಬಿಐ
Update: 2023-04-27 17:39 IST
ಮಂಗಳೂರು, ಎ.27: ಹಜ್ಜ್ ಯಾತ್ರಾರ್ಥಿಗಳ ಸೌಲಭ್ಯಕ್ಕಾಗಿ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ಶಾಖೆಯಲ್ಲಿ ತುರ್ತು ಸಹಾಯವನ್ನು ಒದಗಿಸಲು ವಿಶೇಷ ಕೌಂಟರ್ ಪ್ರಾರಂಭಿಸಲಾಗುವುದು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅವರನ್ನು ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಉದಯ ಕುಮಾರ್ ಬಿ.ಎ., ಚೀಫ್ ಮ್ಯಾನೇಜರ್ ನಾಗ ಸುಬ್ಬರೆಡ್ಡಿ ಭೇಟಿ ಮಾಡಿ ಮಾಹಿತಿ ನೀಡಿದರು.
ಈ ಸಂದರ್ಭ ಕಮಿಟಿಯ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಸಿ.ಎಂ. ಹನೀಫ್, ಹಾಜಿ ಅಹ್ಮದ್ ಬಾವ ಪಡೀಲ್ ಮತ್ತಿತರರು ಉಪಸ್ಥಿತರಿದ್ದರು.