ಈ ಚುನಾವಣೆ ಭ್ರಷ್ಟ ಬಿಜೆಪಿ ಸರಕಾರವನ್ನು ತೊಲಗಿಸುವ ನಿಟ್ಟಿನ ಹೋರಾಟವಾಗಿ ರೂಪುಗೊಳ್ಳಬೇಕು: ಇನಾಯತ್‌ ಅಲಿ

Update: 2023-04-29 16:42 GMT

ಸುರತ್ಕಲ್‌, ಎ.29: ಈ ಚುನಾವಣೆ ಈಗಿನ ಬೆಲೆ ಏರಿಕೆ, ಭ್ರಷ್ಟ ಬಿಜೆಪಿ ಸರಕಾರವನ್ನು ತೊಲಗಿಸುವ ನಿಟ್ಟಿನ ಹೋರಾಟವಾಗಿ ರೂಪುಗೊಳ್ಳಬೇಕೆಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಇನಾಯತ್‌ ಅಲಿ ಹೇಳಿದ್ದಾರೆ.

ಉತ್ತರದ ಬೋಂದೇಲ್‌ನ ಕೃಷ್ಣಾನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ, ಉದ್ಯೋಗ ಸೃಷ್ಠಿಯ ಸುಳ್ಳು ಹೇಳಿರುವ ಭ್ರಷ್ಟ, ಶೇ.40 ಪರ್ಸೆಂಟ್‌ ಬಿಜೆಪಿ ಸರಕಾರವನ್ನು ಸೋಲಿಸಲು ಕಾರ್ಯಕರ್ತರು ನನ್ನ ಹಿಂದೆ ಇದ್ದರೆ, ಗೆದ್ದ ಬಳಿಕ ಕಾರ್ಯಕರ್ತರ ಜೊತೆಗೆ ಇನಾಯತ್‌ ಅಲಿ ಇರುತ್ತಾನೆ ಎಂದು ಅವರು ಭರವಸೆ ನೀಡಿದರು.

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರವನ್ನು ಅಕಾರಕ್ಕೆ ತಂದರೆ, 2024ರಲ್ಲಿ ರಾಹುಲ್‌ ಗಾಂಧಿಯವರನ್ನೇ ಪ್ರಧಾನಿ  ಮಾಡುವ ಕನಸು ಇದೆ. ಅದನ್ನು ನನಗಾಗಿಸಲು ಕಾರ್ಯಕರ್ತರು ನನ್ನೊಂದಿಗೆ ಶ್ರಮ ವಹಿಸಬೇಕೆಂದರು ಅವರು ಕಾರ್ಯಕರ್ರಿಗೆ ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಸುರತ್ಕಲ್‌ ಬ್ಲಾಕ್‌ನ ಅಧ್ಯಕ್ಷ ರಮೇ‌ಶ್‌ ದಂಡಕೇರಿ ವಹಿಸಿದ್ದರು. ಈ ವೇಳೆ ಮಾಜಿ ಮೇಯರ್‌ಗಳಾದ ಕವಿತಾ ಸನಿಲ್‌, ಹರಿನಾಥ್‌, ಕೆಪಿಸಿಸಿ ಉತ್ತರ ಕ್ಷೇತ್ರದ ಉಸ್ತುವಾರಿ ನೀರಜ್‌, ಶ್ರೀನಿವಾಸ್‌ ಸಲ್ಯಾನ್‌, ಕಾರ್ಪೊರೇಟರ್‌ ಅನಿಲ್‌, ರಹ್ಮಾನ್‌ ಖಾನ್‌ ಕುಂಜತ್ತಬೈಲ್‌ ಹಾಗು ಇತರರು ಉಪಸ್ಥಿತರಿದ್ದರು.

ಅಲಿ ಗೆದ್ದರೆ ಯಕ್ಷಗಾನ ಸೇವೆಯ ಹರಕೆ ಇಟ್ಟ ಕಾರ್ಯಕರ್ತ

ಬೋಂದೆಲ್‌ ನರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುರತ್ಕಲ್‌ ಬ್ಲಾಕ್‌ ಅಧ್ಯಕ್ಷ ರಮೇಶ್‌ ದಂಡಕೇರಿ, ನಾನು ಸುಂಕದಕಟ್ಟೆ ದೇವಿಯ ಆರಾಧಕ, ಸುಂಕದಕಟ್ಟೆ ಸ್ವಾಮೀಜಿಯವರ ಭಕ್ತ. ತಾಯಿ ಅಂಬಿಕೆಗೆ ನನ್ನ ಸೇವೆಯಲ್ಲಿ  ತೃಪ್ತಿಯಾಗಿದ್ದರೆ, ಉತ್ತರದಲ್ಲಿ ಇನಾಯತ್‌ ಆಲಿ ಆರಿಸಿ ಶಾಸಕರಾಗುತ್ತಾರೆ. ಹಾಗಾದಲ್ಲಿ  ಕೃಷ್ಣಾನಗರದಲ್ಲಿ ಸುಂಕದಕಟ್ಟೆ ಮೇಳದವರಿಂದ ಯಕ್ಷಗಾನ ಸೇವೆ ನೀಡುವುದಾಗಿ ನುಡಿದರು.

Similar News