×
Ad

ಅಬ್ದುಲ್ ರಹ್ಮಾನ್ ಕುದ್ರೋಳಿ

Update: 2023-04-30 19:59 IST

ಮಂಗಳೂರು, ಎ.30: ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸದಸ್ಯರಾದ  ಕುದ್ರೋಳಿ ನಿವಾಸಿ ಅಬ್ದುಲ್ ರಹ್ಮಾನ್ (ಎಆರ್)   ಶನಿವಾರ  ರಾತ್ರಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಐವರು ಪುತ್ರರು, ಮೂವರು ಪುತ್ರಿಯರು  ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಬಂದರ್‌ನ  ಟು ಸ್ಟಾರ್ಸ್ ಫಿಶರೀಸ್‌ನ ಮಾಲಕರಾಗಿದ್ದ ಅವರು  ಸೀಫುಡ್ ಬೈಯರ್ಸ್ ಅಸೋಸಿಯೇಶನ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 

ಇವರ ನಿಧನಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ ಹಾಜ್ ಕೆ.ಎಸ್.ಮೊಹಮ್ಮದ್ ಮಸೂದ್ ಉಪಾಧ್ಯಕ್ಷ ಹಾಜಿ ಸಿ.ಮಹಮೂದ್, ಹಾಜಿ ಇಬ್ರಾಹಿಂ ಕೋಡಿಜಾಲ್, ಬಾಷ ಸಾಹೇಬ್ ಕುಂದಾಪುರ, ಹಾಜಿ ಸೈಯದ್ ಅಹ್ಮದ್ ಬಾಷ ತಂಙಳ್, ಹಾಜಿ ಬಿ.ಎಂ. ಮುಮ್ತಾಜ್ ಅಲಿ, ಹಾಜಿ ಕೆ.ಎಸ್.  ಇಮ್ತಿಯಾಝ್  ಕಾರ್ಕಳ, ಹಾಜಿ ಎಸ್.ಎಂ. ರಶೀದ್, ಹಾಜಿ ಕೆ.ಪಿ. ಅಹ್ಮದ್ ಪುತ್ತೂರು ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಕೋಶಾಧಿಕಾರಿ ಹಾಜಿ ಮೂಸಾ ಮೊಯ್ದಿನ್ ಸಂತಾಪ ವ್ಯಕ್ತಪಡಿಸಿದ್ದಾರೆ

Similar News