×
Ad

ಆಕ್ಷೇಪಾರ್ಹ ಫೋಟೋ ಕಳುಹಿಸಿ ಬೆದರಿಕೆ: ದೂರು ನೀಡಿದ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್

Update: 2023-05-02 21:53 IST

ಬೆಂಗಳೂರು, ಮೇ 2: ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಫೋಟೋ ಕಳುಹಿಸಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್ ಇಲ್ಲಿನ ಡಿಜೆಹಳ್ಳಿ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. 

ಆಕ್ಷೇಪಾರ್ಹ ವೆಬ್‍ಸೈಟ್‍ನ ಸ್ಕ್ರೀನ್‍ಶಾಟ್ ಲಗತ್ತಿಸಿ ತನ್ನನ್ನು ಟ್ಯಾಗ್ ಮಾಡಲಾಗಿದೆ ಎಂದು ಟ್ವಿಟರ್ ಖಾತೆಯ ವಿರುದ್ಧ ಅವರು ದೂರು ದಾಖಲಿಸಿದ್ದಾರೆ.

ಇನ್ನೂ, ತನ್ನ ವಿಳಾಸವನ್ನು ಎಲ್ಲರಿಗೂ ತಿಳಿಯುವಂತೆ ಪ್ರಕಟಿಸಿರುವ 15 ವಿವಿಧ ಟ್ವಿಟರ್ ಖಾತೆಗಳ ವಿರುದ್ಧವು ಕ್ರಮ ಕೈಗೊಳ್ಳಬೇಕು. ತನಗೆ ಜೀವ ಬೆದರಿಕೆ ಹಾಕಲಾಗಿದೆ. ಎರಡು ಜನಾಂಗದವರ ಮಧ್ಯೆ ದ್ವೇಷವನ್ನುಂಟು ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Similar News